ತಾ. 5 : ಕಟೀಲಿನಲ್ಲಿ ರಂಗಸಂಭ್ರಮ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ತಾ.5 ಭಾನುವಾರ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನ ಹಾಗೂ ಕಟೀಲು ಶ್ರೀ ದುರ್ಗಾಮಕ್ಕಳ ಮೇಳದ ಸಹಯೋಗದಲ್ಲಿ ಆಸಕ್ತ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಗಾಗಿ ರಂಗಪ್ರಸಂಗ ಕಾರ‍್ಯಕ್ರಮ ನಡೆಯಲಿದೆ. ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ ಕಾರ‍್ಯಕ್ರಮ ಉದ್ಘಾಟಿಸಲಿದ್ದು, ಬಲಿಪ ನಾರಾಯಣ ಭಾಗವತ ಅವರ ಮಾರ್ಗದರ್ಶನದಲ್ಲಿ ಮಾಹಿತಿ ಅಧ್ಯಯನ ಶಿಬಿರ ನಡೆಯಲಿದೆ. ಕರ್ಣಪರ್ವ, ಅತಿಕಾಯ, ಮೈರಾವಣ ಕಾಳಗ, ಶ್ರೀ ಕೃಷ್ಣಪಾರಿಜಾತ ಪ್ರಸಂಗಗಳ ಅಧ್ಯಯನ ಯೋಗ್ಯ ಪ್ರದರ್ಶನ ಹಾಗೂ ದಾಖಲಾತಿ ನಡೆಯಲಿದೆ. ನಾಡಿನ 10 ಕಡೆಗಳಲ್ಲಿ ರಂಗ ಪ್ರಸಂಗ ಕಾರ‍್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಎರಡು ಕಡೆಗಳಲ್ಲಿ ನಡೆದಿದೆ. ಕಟೀಲಲ್ಲಿ ನಡೆ ಯುತ್ತಿರುವುದು ಮೂರನೆಯದ್ದು. ಐವತ್ತರಷ್ಟು ಕಲಾವಿದರು ಈ ಅಪೂರ್ವ ಪ್ರದರ್ಶನ ಮತ್ತು ದಾಖಲಾತಿಯಲ್ಲಿ ಭಾಗವಹಿಸಲಿದ್ದಾರೆ. ಎಂದು ಪ್ರತಿಷ್ಟಾನದ ರಾಮಕೃಷ್ಣ ಮಯ್ಯ ತಿಳಿಸಿದರು.
ಶ್ರೀ ದುರ್ಗಾ ಮಕ್ಕಳ ಮೇಳ ಈಗಾಗಲೇ ಪೂರ್ವರಂಗ ಹಾಗೂ ಒಡ್ಡೋಲಗಗಳ ಪ್ರಾಕಾರಗಳನ್ನು ದಾಖಲಿಸಿದ್ದು, ಇದೀಗ ಕಾಲಮಿತಿ ಯಕ್ಷಗಾನದ ಪ್ರದರ್ಶನಗಳಿಂದ ಮರೆಯಾಗುತ್ತಿರುವ ಇತರ ರಂಗ ಪ್ರಾಕಾರಗಳ ದಾಖಲಾತಿಯಲ್ಲಿ ಕಟೀಲಿನಲ್ಲಿ ಸಿರಿಬಾಗಿಲು ಪ್ರತಿಷ್ಟಾನದೊಂದಿಗೆ ಕೈಜೋಡಿಸುತ್ತಿದೆ ಎಂದು ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದರು.ಆಸಕ್ತ ಶಿಬಿರಾರ್ಥಿಗಳಿಗೆ ಮುಕ್ತ ಅವಕಾಶವಿದೆ ಎಂದು ಯೋಗೀಶ ರಾವ್ ಚಿಗುರುಪಾದೆ ತಿಳಿಸಿದರು.

Comments

comments

Comments are closed.

Read previous post:
Kinnigoli-01021703
ಕಟೀಲು ಮುಖ್ಯ ಶಿಕ್ಷಕ ಗೋಪಾಲ ಶೆಟ್ಟಿ ಬೀಳ್ಕೊಡುಗೆ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 40 ವರುಷಗಳಿಂದ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೈ. ಗೋಪಾಲ ಶೆಟ್ಟಿ ಅವರನ್ನು ಸನ್ಮಾನಿಸಿ...

Close