ಕಟೀಲು ಮುಖ್ಯ ಶಿಕ್ಷಕ ಗೋಪಾಲ ಶೆಟ್ಟಿ ಬೀಳ್ಕೊಡುಗೆ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 40 ವರುಷಗಳಿಂದ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೈ. ಗೋಪಾಲ ಶೆಟ್ಟಿ ಅವರನ್ನು ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮ ಮಂಗಳವಾರ ಶಾಲೆಯಲ್ಲಿ ನಡೆಯಿತು. ಕಟೀಲು ದೇವಳದ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜ, ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ಕಮಲದೇವಿ ಪ್ರಸಾದ ಆಸ್ರಣ್ಣ, ಶ್ರೀಹರಿ ನಾರಾಯಣದಾಸ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ವೆಂಕರಮಣ ಹೆಗಡೆ, ಸುಧೀರ್ ಶೆಟ್ಟಿ ಮತ್ತಿತರರಿದ್ದರು. ಶಿಕ್ಷಕಿ ಶ್ವೇತಾ ಮಾಡ ಅಭಿನಂದನಾ ಮಾತುಗಳನ್ನಾಡಿದರು. ನೂತನ ಮುಖ್ಯ ಶಿಕ್ಷಕಿ ಸರೋಜ ಸ್ವಾಗತಿಸಿದರು. ಇಂಗ್ಲಿಷ್ ಮಾಧ್ಯಮದ ಮುಖ್ಯ ಶಿಕ್ಷಕಿ ಲತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-01021703

Comments

comments

Comments are closed.

Read previous post:
Kinnigoli-01021702
ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ

ಕಿನ್ನಿಗೋಳಿ: ಕಟೀಲು ಗಿಡಿಗೆರೆ ಚೇತನಾ ಯುವಜನ ಸೇವಾ ಸಮಿತಿಯ ಆಶ್ರಯದಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ತಾಳಮದ್ದಲೆ ರೂಪದಲ್ಲಿ ನಡೆಯಿತು.

Close