ಇನ್ನರ್ ವೀಲ್ ಕ್ಲಬ್‌ ಚೆಯರ್‌ಮನ್ ಭೇಟಿ

ಕಿನ್ನಿಗೋಳಿ: ಸ್ನೇಹ ಸೌಹಾರ್ದತೆಯಿಂದ ಸೇವಾ ಸಂಸ್ಥೆಗಳು ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡಿ ಸಾರ್ಥಕತೆ ಹಾಗೂ ಜನರ ಹೃದಯ ಗೆಲ್ಲಬೇಕು. ಎಂದು ಇನ್ನರ್ ವೀಲ್ ಜಿಲ್ಲೆ 318 ರ ಜಿಲ್ಲಾ ಚೆಯರ್‌ಮನ್ ಚಿತ್ರಾ ವಿ ರಾವ್ ಎಂದು ಹೇಳಿದರು.
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್‌ಗೆ ಜಿಲ್ಲಾ ಚೆಯರ್‌ಮನ್ ಸೋಮವಾರ ಅಧಿಕೃತ ಭೇಟಿ ನೀಡಿದ ಸಂದರ್ಭ ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ವತಿಯಿಂದ ವಿವಿಧ ಯೋಜನೆಗಳನ್ನು ನಡೆಸಲಾಯಿತು. ಅನಾರೋಗ್ಯ ಪೀಡಿತರಿಗೆ ಧನ ಸಹಾಯ, ಅನಾಥಶ್ರಮದ ವೃದ್ಧರಿಗೆ ಗಾಲಿಕುರ್ಚಿ, ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬಹುಮುಖ ಪ್ರತಿಭೆ ಪ್ರತಿಭಾವಂತ ವಿದ್ಯಾರ್ಥಿನಿ ದೃತಿ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿಮಲಾ ತ್ಯಾಗರಾಜ್, ಕಾರ್ಯದರ್ಶಿ ಸವಿತಾ ಸಂತೋಷ್ ಉಪಸ್ಥಿತರಿದ್ದರು.
ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.

Kinnigoli-01021701

Comments

comments

Comments are closed.

Read previous post:
Kinnigoli-300117010
ಬಸವಣ್ಣ, ಜಾಗತಿಕ ದರ್ಶನಗಳು-ಪುಸ್ತಕ ಬಿಡುಗಡೆ

ಕಿನ್ನಿಗೋಳಿ : ಶನಿವಾರ ಧಾರವಾಡದ ಮುರುಗಾ ಮೃತ್ಯುಂಜಯ ಮಠದಲ್ಲಿ ಉದಯಕುಮಾರ ಹಬ್ಬು ಅವರು ಬರೆದ ಬಸವಣ್ಣ ಮತ್ತು ಜಾಗತಿಕ ದರ್ಶನಗಳು-ಒಂದು ತೌಲನಿಕ ಅಧ್ಯಯನ ಅಧ್ಯಾತ್ಮಿಕ ಪುಸ್ತಕ ಬಿಡುಗಡೆಗೊಂಡಿತು ಈ...

Close