ನಿಧನ – ಡಾ. ರವೀಂದ್ರನಾಥ ಪೂಂಜಾ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಯ ಮೊಕ್ತೇಸರ ಹಾಗೂ ಚೆನೈಯ ಪ್ರಸಿದ್ಧ ವೈದ್ಯ ಕೊಡೆತ್ತೂರು ಗುತ್ತು ಡಾ. ರವೀಂದ್ರನಾಥ ಪೂಂಜ ( 74 ) ಗುರುವಾರ ಮಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ , ಇಬ್ಬರು ಪುತ್ರಿಯರು, ಪುತ್ರರನ್ನು ಅಗಲಿದ್ದಾರೆ. ಚೆನೈಯಲ್ಲಿ ಕಳೆದ 50 ವರ್ಷಗಳಿಂದ ವೈದ್ಯರಾಗಿದ್ದು ಜನಾನುರಾಗಿಯಾಗಿದ್ದರು. ಕಳೆದ 2016 ಜೂ. 1 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಕೊಡೆತ್ತೂರು ಗುತ್ತು ಮನೆತನದ ಪರವಾಗಿ ಅನುವಂಶಿಯ ಮೊಕ್ತೇಸರರಾಗಿ ಅಧಿಕಾರ ವಹಿಸಿಕೊಂಡಿದ್ದರು. ದೇವಳದ ಅಭಿವೃದ್ಧಿಯ ಬಗ್ಗೆ ಅತೀವ ಕಾಳಜಿ ಹಾಗೂ ಆಸಕ್ತಿ ಹೊಂದಿದ್ದರು. ಬುಧವಾರ ಕಟೀಲಿನಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಭಾಗವಹಿಸಿದ್ದರು.
ಮಂಗಳೂರಿನಲ್ಲಿ ಹುಟ್ಟಿ ಬಳಿಕ ಮದ್ರಾಸನಲ್ಲಿ ಶಿಕ್ಷಣ ಪಡೆದು ವೈದ್ಯರಾಗಿದ್ದ ಇವರು ಅನೇಕ ಸಂಘ ಸಂಸ್ಥೆಗಳಲ್ಲಿ ಭಾಗಿಯಾಗಿದ್ದು ಜನ ಪರ ಸೇವೆ ಮಾಡಿದ್ದಾರೆ. ಚೆನೈ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿ, ಕರ್ನಾಟಕ ಸಂಘದಿಂದ ಸೇವಾ ರತ್ನ ಪ್ರಶಸ್ತಿ, ತಮಿಳು ಸಂಘಂನಿಂದ ಮದರ್ ತೇರೆಸಾ ಪ್ರಶಸ್ತಿ, ವೈದ್ಯರ ಸಂಘದಿಂದ ಪ್ರಶಸ್ತಿ, ಸಹಿತ ಇವರ ವೈದ್ಯಕೀಯ ಸೇವೆಗಾಗಿ ಹಲವಾರು ಪ್ರತಿಷ್ಠಿತ ಪುರಸ್ಕಾರ , ಗೌರವ ಪ್ರಶಸ್ತಿ ಸಹಿತ ಸಮ್ಮಾನಗಳು ಸಂದಿವೆ.
ಅಂತ್ಯ ಸಂಸ್ಕಾರ
ಶುಕ್ರವಾರ ಬೆಳಿಗ್ಗೆ 10.30ಕ್ಕೆ ಬೋಳೂರು ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಸಂತಾಪ ಸೂಚಿಯಾಗಿ ಕಟೀಲು ದೇವಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಟೀಲು ದೇವಸ್ಥಾನದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, , ದೇವಸ್ಥಾನದ ತಂತ್ರಿಗಳಾದ ವೇದವ್ಯಾಸ ತಂತ್ರಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ , ವೆಂಕಟರಮಣ ಆಸ್ರಣ್ಣ , ಕಮಲಾದೇವಿ ಪ್ರಸಾದ್ ಆಸ್ರಣ್ಣ , ಶ್ರೀಹರಿನಾರಾಯಣದಾಸ ಆಸ್ರಣ್ಣ , ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಅಮರನಾಥ ಶೆಟ್ಟಿ , ಶಾಸಕ ಕೆ. ಅಭಯಚಂದ್ರ ಜೈನ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ವೇದವ್ಯಾಸ ಉಡುಪ, ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ , ತಾಳಿಪಾಡಿ ಗುತ್ತು ಧನಪಾಲ್ ಶೆಟ್ಟಿ , ಬಂಟರ ಯಾನೆ ನಾಡವರ ಮಾತ ಸಂಘದ ಅಧ್ಯಕ್ಷ ಅಜಿತ್ ಕಮಾರ್ ಮಾಲಾಡಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ , ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ , ವಾಸುದೇವ ಶಿಬರಾಯ , ಅತ್ತೂರು ಬಲು ಗಣಪತಿ ಉಡುಪ, ಸುರಗಿರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ , ಅತ್ತೂರು ಭಂಡಾರ ಮನೆ ಶಂಭು ಮುಕ್ಕಾಲ್ದಿ , ಏಳಿಂಜೆ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಭಾಕರ ಶೆಟ್ಟಿ ಏಳಿಂಜೆ ಕೊಂಜಾಲು ಗುತ್ತು, ಸುಧೀರ್ ಶೆಟ್ಟಿ ಕಟೀಲು, ಪ್ರವೀಣ್ ಭಂಡಾರಿಕಟೀಲು, ಕಟೀಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ , ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ , ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಜಿ. ಪಂ. ಸದಸ್ಯ ಈಶ್ವರ್ ಕಟೀಲು, ಉದ್ಯಮಿ ಗಿರೀಶ್ ಶೆಟ್ಟಿ , ಯಕ್ಷಲಹರಿ ಅಧ್ಯಕ್ಷ ಸತೀಶ್ ರಾವ್ ಕಿನ್ನಿಗೋಳಿ, ಉದ್ಯಮಿ ದೊಡ್ಡಯ್ಯ ಮೂಲ್ಯ , ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ಮತ್ತಿತರರು ಸಂತಾಪ ಸೂಚಿಸಿದ್ದಾರೆ.

Kinnigoli-02021701

Comments

comments

Comments are closed.

Read previous post:
ತಾ. 5 : ಕಟೀಲಿನಲ್ಲಿ ರಂಗಸಂಭ್ರಮ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ತಾ.5 ಭಾನುವಾರ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನ ಹಾಗೂ ಕಟೀಲು ಶ್ರೀ ದುರ್ಗಾಮಕ್ಕಳ ಮೇಳದ ಸಹಯೋಗದಲ್ಲಿ ಆಸಕ್ತ ವೃತ್ತಿಪರ...

Close