ನಿರಂತರ ಪ್ರಯತ್ನವಿದ್ದರೆ ಗೆಲುವು ಸಾಧ್ಯ

ಕಿನ್ನಿಗೋಳಿ: ಸಾಧನೆಯ ಛಲ, ಮನೋಧೈರ್ಯದ ಜೊತೆಗೆ ನಿರಂತರ ಪ್ರಯತ್ನವಿದ್ದರೆ ಯಶಸ್ಸು ಹಾಗೂ ಗೆಲುವು ಸಾಧ್ಯ ಎಂದು ಕಿನ್ನಿಗೋಳಿ ಜಿಎಸ್‌ಬಿ ಸಭಾ ಅಧ್ಯಕ್ಷ ಕೆ. ಅಚ್ಯುತ ಮಲ್ಯ ಹೇಳಿದರು.
ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಪವರ್ ಲಿಪ್ಟಿಂಗ್ ಕ್ರೀಡೆಯಲ್ಲಿ ಎರಡು ಚಿನ್ನದ ಪದಕ ಪಡೆದ ಮಂಜುನಾಥ ಮಲ್ಯ ಅವರನ್ನು ಸನ್ಮಾನಿಸಿ ಮಾತನಾಡಿದರು.
ಕಿನ್ನಿಗೋಳಿ ಶ್ರೀ ರಾಮಮಂದಿರ ಸಮಿತಿಯ ರಾಧಾಕೃಷ್ಣ ನಾಯಕ್ ಮೂರುಕಾವೇರಿ, ರಾಜೇಶ್ ನಾಯಕ್, ರಾಘವೇಂದ್ರ ಪ್ರಭು, ರಘುವೀರ ಕಾಮತ್, ಅನಂತ್ ಕಾಮತ್, ಅರ್ಚಕ ಗಿರೀಶ್ ಭಟ್, ಜಿಎಸ್‌ಬಿ ಸಭಾ ಕಾರ್ಯದರ್ಶಿ ಸುರೇಂದ್ರನಾಥ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-04021701

Comments

comments

Comments are closed.