ಕೆಸಿಸಿ ಆರೋಗ್ಯ ಕಾರ್ಡ್ ಶಿಬಿರ ಉದ್ಘಾಟನೆ

ಕಿನ್ನಿಗೋಳಿ : ಭ್ರಾಮರಿ ಮಹಿಳಾ ಸಮಾಜ, ಮೆನ್ನಬೆಟ್ಟು- ಕಿನ್ನಿಗೋಳಿ ಇವರ ಸಹಭಾಗಿತ್ವದಲ್ಲಿ ಮಂಗಳೂರಿನ ಎಲ್ಲಾ ಪ್ರಮುಖ ಆಸ್ಪತ್ರೆಗಳ ಪ್ರತೀ ಭೇಟಿಗೂ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಹೊರರೋಗಿ ಮತ್ತು ಒಳರೋಗಿ ದಾಖಲಾತಿಗೂ ಚಿಕಿತ್ಸೆ ಲಭಿಸುವ “ಕೆಸಿಸಿ ಆರೋಗ್ಯ ಕಾರ್ಡ್”ನ ನೋಂದಾವಣಾ ಶಿಬಿರ ಭಾನುವಾರ ಮೆನ್ನಬೆಟ್ಟು ಭ್ರಾಮರೀ ಮಹಿಳಾ ಸಮಾಜದಲ್ಲಿ ಜರಗಿತು.
ಯುಗಪುರುಷ ಸಂಪಾದಕ ಕೆ.ಭುವನಾಭಿರಾಮ ಉಡುಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿಬಿರ ಉದ್ಘಾಟಿಸಿದರು. ಅಂಗನವಾಡಿ ಶಿಕ್ಷಕಿ ಸಂಧ್ಯಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಕೊಡೆತ್ತೂರು ಆದರ್ಶ ಬಳಗ ಅಧ್ಯಕ್ಷ ದಾಮೋದರ್ ಶೆಟ್ಟಿ, ಮಂಗಳೂರಿನ ಕರ್ನಾಟಕ ಚಾರಿಟಿ ಕೌನ್ಸಿಲ್‌ನ ವಾಸಿಂ, ಸಫದ್ ಉಪಸ್ಥಿತರಿದ್ದರು.
ಭ್ರಾಮರಿ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್ ಸ್ವಾಗತಿಸಿದರು. ಸುನಂದ ಕರ್ಕೇರ ವಂದಿಸಿದರು. ಅನುಷಾ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

Kinnigoli-06021707

Comments

comments

Comments are closed.

Read previous post:
Kinnigoli-06021706
ಕಟೀಲು ರಂಗಸಂಭ್ರಮ

ಕಿನ್ನಿಗೋಳಿ : ಆಧುನಿಕತೆಯ ದಾವಂತದಲ್ಲಿ ಯಕ್ಷಗಾನದ ರೂಪು ರೇಷೆಗಳು ಬದಲಾಗುವ ವಾತಾವರಣ ಕಂಡು ಬರುತ್ತಿದೆ. ಹಳೆಯ ರಂಗ ಕ್ರಮಗಳು ಮೂಲ ಚೌಕಟ್ಟಿಗೆ ಯಾವುದೇ ರೀತಿಯಲ್ಲಿ ದಕ್ಕೆಯಾಗದಂತೆ ಪರಂಪರೆಯನ್ನು ಉಳಿಸಿಕೊಂಡು ಬದಲಾಗಬೇಕು....

Close