ಬೊಳ್ಳೂರು ಮಸೀದಿ 34ನೇ ವಾರ್ಷಿಕೋತ್ಸವ

ಕಿನ್ನಿಗೋಳಿ : ಹಳೆಯಂಗಡಿ ಬೊಳ್ಳೂರಿನ ಮುಹಿಯ್ಯದ್ದೀನ್ ಜುಮಾ ಮಸ್ಜಿದ್‌ನ 34ನೇ ವಾರ್ಷಿಕೋತ್ಸವದ ಪ್ರಯುಕ್ತ ಧಾರ್ಮಿಕ ಮತಪ್ರವಚನ ಕಾರ್ಯಕ್ರಮವು ಫೆ.7ರಿಂದ 11ರವರೆಗೆ ನಡೆಯಲಿದೆ.
ಫೆ.೭ರಂದು ಧ್ಜಜರೋಹಣ, ನೂತನ ಕಟ್ಟಡದ ಉದ್ಘಾಟನೆಯನ್ನು ಬೊಳ್ಳೂರು ಮಸೀದಿಯ ಹಾಜಿ ಮುಹಮ್ಮದ್ ಅಝ್‌ಹರ್ ಫೈಝಿ ನೆರವೇರಿಸಲಿದ್ದಾರೆ. ಧಾರ್ಮಿಕ ಪ್ರವಚನವನ್ನು ಕೆ.ಐ.ಅಬ್ದುಲ್ ಕಾದರ್ ದಾರಿಮಿ ಕುಕ್ಕಿಲ, ಫೆ.8ರಂದು ಕಾಸರಗೋಡಿನ ಕೆ.ಎಂ.ಅಬ್ದುಲ್ ಅಝೀಝ್ ದಾರಿಮಿ, ಫೆ.9ರಂದು ಝೂಬೈರ್ ದಾರಿಮಿ, ಫೆ.10ರಂದು ಪಾಣತ್ತೂರಿನ ಅಬ್ದುಲ್ ಅಝೀಝ್ ಅಶ್ರಫಿ, ಫೆ.11ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿ, ಸಜಿಪದ ಅಶಾಕ ಫೈಝಿ, ಕೇರಳದ ಅಸೈಯ್ಯದ್ ನಜ್‌ಮುದ್ದೀನ್, ಸಚಿವರಾದ ರಮಾನಾಥ ರೈ, ಶಾಸಕರಾದ ಕೆ.ಅಭಯಚಂದ್ರ ಜೈನ್, ಐವನ್ ಡಿಸೋಜಾ, ಪ್ರಮುಖರಾದ ಚಂದ್ರಶೇಖರ ನಾನಿಲ್, ಅನ್ವರ್ ಸಾಧಾತ್, ಇನಾಯತ್ ಆಲಿ ಮೂಲ್ಕಿ ಮತ್ತಿತರರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿಶೇಷವಾಗಿ ಬೊಳ್ಳೂರು ಮಸೀದಿಯ ಮುಹಮ್ಮದ್ ಅಝ್‌ಹರ್ ಫೈಝಿ, ಎಂ.ಎ.ಗಫೂರ್, ಎಚ್.ವಸಂತ ಬೆರ್ನಾಡ್, ಅಬ್ದುಲ್ ಖಾದರ್, ಹಸೈನಾಕ ಪಳ್ಳಿ ಗುಡ್ಡೆ, ಅಹ್ಮದ್ ರವೂಫ್ ಸಖಾಫಿ, ಮುಹಮ್ಮದ್ ಇಸ್ಮಾಯಿಲ್ ಹಾಪಿಲ್‌ರನ್ನು ಸಮ್ಮಾನಿಸಲಾಗುವುದು ಎಂದು ಬೊಳ್ಳೂರು ಮಸೀದಿಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Comments

comments

Comments are closed.

Read previous post:
Kinnigoli-06021705
ಭಜನೆಯಿಂದ ಮಾನಸಿಕ ಸದೃಡತೆ ಹೆಚ್ಚುತ್ತದೆ

ಕಿನ್ನಿಗೋಳಿ : ಭಜನೆಯಿಂದ ದೇವರನ್ನು ಬೇಗ ಒಲಿಸಿಕೊಳ್ಳಬಹುದು ಎಂಬುದು ಪೂರ್ವಿಕರು ಕಂಡುಕೊಂಡಂತಃ ಸತ್ಯ. ಭಜನೆಯಿಂದ ಏಕಾಗ್ರತೆ ಮಾನಸಿಕ ಸದೃಡತೆ ಹೆಚ್ಚುತ್ತದೆ. ಎಂದು ದ. ಕ. ಜಿಲ್ಲಾ ಪಂಚಾಯಿತಿ...

Close