ಗ್ರಾಮೀಣ ಜನರ ಏಳಿಗೆಗಾಗಿ ಶ್ರಮಿಸಬೇಕು

ಕಿನ್ನಿಗೋಳಿ : ಸೇವಾ ಸಂಸ್ಥೆಗಳು ಗ್ರಾಮೀಣ ಜನರಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಿ ಸಮಾಜ ಉಪಯೋಗ ಕೆಲಸಗಳನ್ನು ಮಾಡಿ ಜನರ ಏಳಿಗೆಗಾಗಿ ಶ್ರಮಿಸಬೇಕು ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಗರ್ವನರ್ ಡಾ. ಆರ್. ಎಸ್ ನಾಗಾರ್ಜುನ್ ಹೇಳಿದರು.
ಗುರುವಾರ ಕಿನ್ನಿಗೋಳಿ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಮಾತನಾಡಿದರು.
ಈ ಸಂದರ್ಭ ಹಿರಿಯ ರಾಷ್ಟ್ರೀಯ ಪವರ್ ಲಿಪ್ಟಿಂಗ್ ಕ್ರೀಡಾ ಪಟು ಮಂಜುನಾಥ ಮಲ್ಯ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಶ್ರೇಷ್ಠ ಪ್ರಾಚಾರ್ಯ ಪ್ರಶಸ್ತಿ ಪಡೆದ ಕಟೀಲು ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪ್ರೊ. ಜಯರಾಮ ಪೂಂಜ, ರೋಟರಿ ಜಿಲ್ಲೆ 3181ರ ವಲಯ 1ರ ಸಹಾಯಕ ಗರ್ವನರ್ ಆಗಿ ನಿಯುಕ್ತಿಗೊಂಡ ಜೋಸ್ಸಿ ಪಿಂಟೋ, ರೋಟರಿ ಶಾಲೆಗೆ ಕುಡಿಯುವ ನೀರಿನ ಯೋಜನೆಗೆ ಸಹಾಯಗೈದ ಕೃಷ್ಣ ಹಾಗೂ ಲತಾ ಕೃಷ್ಣ, ಪಿ. ಸತೀಶ್ ರಾವ್, ಶೈಲಾ ಸಿಕ್ವೇರಾ ಅವರನ್ನು ಅಭಿನಂದಿಸಲಾಯಿತು.
ಅಶೊಕ್ ಕೋಟ್ಯಾನ್ ಅವರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು.
ರೋಟರಿ ಜಿಲ್ಲೆ 3181ರ ವಲಯ 1ರ ಸಹಾಯಕ ಗವರ್ನರ್ ಜಿನ್‌ರಾಜ್ ಸಾಲ್ಯಾನ್, ಕಿನ್ನಿಗೋಳಿ ರೋಟರಿ ನಿಕಟಪೂರ್ವ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ, ನಿಯೋಜಿತ ಅಧ್ಯಕ್ಷೆ ಸೆವ್ರಿನ್ ಲೋಬೊ, ಕಾರ್ಯದರ್ಶಿ ದೇವಿದಾಸ್ ಶೆಟ್ಟಿ ಉಪಸ್ಥಿತರಿದ್ದರು.
ರೋಟರಿ ಅಧ್ಯಕ್ಷ ರಮಾನಂದ ಪೂಜಾರಿ ಸ್ವಾಗತಿಸಿದರು. ಹೆರಿಕ್ ಪಾಯಸ್ ಪರಿಚಯಿಸಿದರು. ಸಂತೋಷ್ ಆಚಾರ್ಯ ವಂದಿಸಿದರು. ಶೈಲಾ ಸಿಕ್ವೇರಾ ಹಾಗೂ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-06021703

Comments

comments

Comments are closed.

Read previous post:
Kinnigoli-06021702
ನಿಡ್ಡೋಡಿ ಬಂಗೇರಪದವು ಸನ್ಮಾನ

ಕಿನ್ನಿಗೋಳಿ: ನಿಡ್ಡೋಡಿ ಬಂಗೇರಪದವಿನಲ್ಲಿ ಕಟೀಲು ಮೇಳದವರ ಬಯಲಾಟ ಸಂದರ್ಭ ಹಿರಿಯ ವೇಷದಾರಿ ರಮೇಶ್ ಭಟ್ ಬಾಯರು, ಮೇಳದ ಮೆನೇಜರ್ ಹಾಗೂ ಕಲಾವಿದ ಶ್ರೀಧರ ಪೂಜಾರಿ ಪಂಜಾಜೆ, ನೇಪಥ್ಯದ ಕಲಾವಿದ...

Close