ಕುಟುಂಬದ ಚೈತನ್ಯ ಶಕ್ತಿಯೇ ಮಹಿಳೆ

ಕಿನ್ನಿಗೋಳಿ: ಕುಟುಂಬದ ಚೈತನ್ಯ ಶಕ್ತಿಯೇ ಮಹಿಳೆ. ಮಹಿಳೆಯರು ಸಮಾಜದ ಮುಂಚೂಣಿಗೆ ಬಂದಾಗ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ದೇಶ ಪ್ರಗತಿ ಹೊಂದುತ್ತದೆ. ಎಂದು ವಿಜಯಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮೀನಾ ಆಳ್ವ ಹೇಳಿದರು.
ಶನಿವಾರ ನಡೆದ ಸಂಗಮ ಮಹಿಳಾ ಹಾಗೂ ಯುವತಿ ಮಂಡಲದ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನರಾದ ರಕ್ಷಿತಾ,ನಿತೇಶ್ ಹಾಗೂ ಶಶಿಕಲಾ ಅವರನ್ನು ಸನ್ಮಾನಿಸಲಾಯಿತು.
ಅನಾರೋಗ್ಯ ಪೀಡಿತೆ ಸುಷ್ಮಾ ಅವರಿಗೆ ಚಿಕಿತ್ಸೆಗಗಿ ಧನ ಸಹಾಯ ಮಾಡಲಾಯಿತು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ ಯೋಗೀಶ್ ರಾವ್, ಇಂದಿರಾಗಾಂ ಮಕ್ಕಳ ಅರೋಗ್ಯ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕಿ ಶೈಲಾ ಸಿಕ್ವೇರಾ, ಪುನರೂರು ಭಾರತ ಮಾತಾ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ರಾವ್, , ಸಂಗಮ ಮಹಿಳಾ ಹಾಗೂ ಯುವತಿ ಮಂಡಲದ ಗೌರವಾಧ್ಯಕ್ಷೆ ಶಾಲೆಟ್ ಪಿಂಟೊ, ಸಂಘಟಕಿ ನಂದಾ ಪಾಯಸ್, ಅಧ್ಯಕ್ಷೆ ದಮಯಂತಿ, ಕಾರ್ಯದರ್ಶಿ ಶೋಭಾ ರಾವ್, ಕೋಶಾಕಾರಿ ಸಂಜೀವಿ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಶಶಿ ಸುರೇಶ್ ಸ್ವಾಗತಿಸಿದರು. ಪ್ರಮೀಳಾ ಡಿ. ಸುವರ್ಣ ವಾರ್ಷಿಕ ವರದಿ ವಾಚಿಸಿದರು. ಆಶಾಲತ ಕಾರ್ಯಕ್ರಮ ನಿರೂಪಿಸಿದರು.

Kinnigoli-i07021702

 

Comments

comments

Comments are closed.

Read previous post:
Kinnigoli-i07021701
ಯೋಗದಿಂದ ಏಕಾಗ್ರತೆ ಹಾಗೂ ಆರೋಗ್ಯ

ಕಿನ್ನಿಗೋಳಿ: ಯೋಗದಿಂದ ಏಕಾಗ್ರತೆ,ಮಾನಸಿಕ ಕ್ಷಮತೆ ಹಾಗೂ ಆರೋಗ್ಯಯುತ ಜೀವನ ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಕೆ. ಬಾಲಕೃಷ್ಣ ಶೆಟ್ಟಿ ಹೇಳಿದರು. ಸೋಮವಾರ...

Close