ಯೋಗದಿಂದ ಏಕಾಗ್ರತೆ ಹಾಗೂ ಆರೋಗ್ಯ

ಕಿನ್ನಿಗೋಳಿ: ಯೋಗದಿಂದ ಏಕಾಗ್ರತೆ,ಮಾನಸಿಕ ಕ್ಷಮತೆ ಹಾಗೂ ಆರೋಗ್ಯಯುತ ಜೀವನ ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಕೆ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಸೋಮವಾರ ಕೆಂಚನಕೆರೆ ಯೋಗೋಪಾಸನ ಕೇಂದ್ರದಲ್ಲಿ ಕಳೆದ ೫ ವರುಷಗಳಿಂದ ನಿರಂತರ ಸಾವಿರಾರೂ ಜನರಿಗೆ ಉಚಿತ ಯೋಗ ಶಿಕ್ಷಣ ನೀಡುತ್ತಿರುವ ಜಯ ಮುದ್ದು ಶೆಟ್ಟಿ ಹಾಗೂ ಅವರ ಪತ್ನಿ ಗೀತಾ ಶೆಟ್ಟಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗ ಶಿಕ್ಷಕ ಜಯ ಶೆಟ್ಟಿ ಮಾತನಾಡಿ ರಕ್ತದೊತ್ತಡ ಹಾಗೂ ಮಧು ಮೇಹ ರೋಗ ಅಲ್ಲ ಅದು ಕೇವಲ ಮಾನವನ ದೇಹ ವ್ಯವಸ್ಥೆಯ ಏರುಪೇರಿನ ಸಮಸ್ಯೆಯಾಗಿದ್ದು ಅದನ್ನು ಯೋಗ ಸಾಧನೆಯ ಮೂಲಕವಾಗಿ ಸರಿಪಡಿಸಬಹುದು. ಕಳೆದ ಐದು ವರ್ಷದಿಂದ ಹಲವಾರು ಜನರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ತೋಕೂರು ಐಟಿಐ ಪ್ರಿನ್ಸಿಪಾಲ್ ವೈ. ಎನ್ ಸಾಲ್ಯಾನ್ ಮಾತನಾಡಿ ಯೋಗ ಸಾಧನಾ ಕ್ರಮ ತಮ್ಮ ದೈನಂದಿನ ಜೀವನದಲ್ಲಿಅಳವಡಿಸಿದಾಗ ಮಾತ್ರ ಸ್ವಸ್ಥ ಆರೋಗ್ಯ ಸಿಗುತ್ತದೆ. ಎಂದು ಹೇಳಿದರು.
ಒರಿಯಂಟಲ್ ವಿಮಾ ಕಂಪನಿಯ ಯಾದವ ದೇವಾಡಿಗ ಹಳೆಯಂಗಡಿ , ಮೂಲ್ಕಿ ವಿಜಯಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮೀನ ಆಳ್ವ, ಉದ್ಯಮಿ ರಾಮಚಂದ್ರ ನಾಯಕ್, ಉಪನ್ಯಾಸಕ ವಿಶ್ವನಾಥ ರಾವ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಸತೀಶ್ ರಾವ್ ವಂದಿಸಿದರು. ಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-i07021701

Comments

comments

Comments are closed.

Read previous post:
Mulki07021701
ಒಂಬತ್ತು ಮಾಗಣೆ ; ಪ್ರತಿಭಾ ಪುರಸ್ಕಾರ

ಮುಲ್ಕಿ: ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಡರಾಗಿ ಸಂಘಟನಾ ಶಕ್ತಿಯೊಂದಿಗೆ ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಂಡು ಸುಶಿಕ್ಷಿತ ಸಮಾಜದ ನಿರ್ಮಾಣ ಮಾಡಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ...

Close