ಒಂಬತ್ತು ಮಾಗಣೆ ; ಪ್ರತಿಭಾ ಪುರಸ್ಕಾರ

ಮುಲ್ಕಿ: ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಡರಾಗಿ ಸಂಘಟನಾ ಶಕ್ತಿಯೊಂದಿಗೆ ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಂಡು ಸುಶಿಕ್ಷಿತ ಸಮಾಜದ ನಿರ್ಮಾಣ ಮಾಡಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಮೂಲ್ಕಿ ಗೇರುಕಟ್ಟೆ ಒಂಬತ್ತು ಮಾಗಣೆಯ ಮುಂಡಾಳ ( ಪ. ಜಾ) ಶಿವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮಾಗಣೆಯ ಮುಂಡಾಳ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಂಘದ ವಾರ್ಷಿಕ ಮಹಾ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನೀಲ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಳವೆಯಲ್ಲಿಯೇ ಮಕ್ಕಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಗಮನ ಅವರ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸಿ ಶಿಕ್ಷಣ ನೀಡಿದಾಗ ಪ್ರತಿಭಾವಂತರಾಗಿ ರೂಪುಗೊಳ್ಳುತ್ತಾರೆ. ಎಂದರು.
ಒಂಬತ್ತು ಮಾಗಣೆಯ ಮುಂಡಾಳ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸಾರಿಕಾ, ವರ್ಷಾ ಬಿ. ಅಂಚನ್, ಕುಮಾರ್, ಕೃತಿಕಾ, ಉಜ್ವಲ್, ಸೌಜನ್ಯ, ವಿಕೇತ ವಿ.ಕೆ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಒಂಬತ್ತು ಮಾಗಣೆಯ ಮುಂಡಾಳ ಶಿವಸಮಾಜ ಸೇವಾ ಸಂಘದ ಅಧ್ಯಕ್ಷ ಮಾಧವ ಬಂಗೇರ ಅಧ್ಯಕ್ಷತೆವಹಿಸಿದ್ದರು.
ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ, ಒಂಬತ್ತು ಮಾಗಣೆಯ ಮುಂಡಾಳ ಶಿವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಕೆ. ಸುಧಾಕರ, ಕಾರ್ಯದರ್ಶಿ ಪ್ರಕಾಶ್ ಕೊಡ್ಮಾನ್, ಕೋಶಾಧಿಕಾರಿ ರಮೇಶ ಬಿ., ದ.ಕ. ಪಂಚಾಯಿತಿರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಗುತ್ತಿಗೆದಾರ ಪ್ರದೀಪ್ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು.
ಒಂಬತ್ತು ಮಾಗಣೆಯ ಮುಂಡಾಳ ಶಿವ ಸಮಾಜ ಸೇವಾ ಸಂಘದ ಅಧ್ಯಕ್ಷ ಮಾಧವ ಬಂಗೇರ ಪ್ರಸ್ತಾವನೆಗೈದು ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಭಾಸ್ಕರ ಮಾಬೆನ್ ಮಂಡಿಸಿದರು. ಸುಕುಮಾರ್ ವಂದಿಸಿದರು. ರವೀಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Mulki07021701

Comments

comments

Comments are closed.

Read previous post:
Kinnigoli-06021707
ಕೆಸಿಸಿ ಆರೋಗ್ಯ ಕಾರ್ಡ್ ಶಿಬಿರ ಉದ್ಘಾಟನೆ

ಕಿನ್ನಿಗೋಳಿ : ಭ್ರಾಮರಿ ಮಹಿಳಾ ಸಮಾಜ, ಮೆನ್ನಬೆಟ್ಟು- ಕಿನ್ನಿಗೋಳಿ ಇವರ ಸಹಭಾಗಿತ್ವದಲ್ಲಿ ಮಂಗಳೂರಿನ ಎಲ್ಲಾ ಪ್ರಮುಖ ಆಸ್ಪತ್ರೆಗಳ ಪ್ರತೀ ಭೇಟಿಗೂ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಹೊರರೋಗಿ ಮತ್ತು...

Close