ಕಿನ್ನಿಗೋಳಿ ಗ್ರಾ. ಪಂ. ಗ್ಯಾಸ್ ವಿತರಣೆ

ಕಿನ್ನಿಗೋಳಿ: ಗ್ರಾಮೀಣ ಜನರು ಅಡುಗೆ ಅನಿಲನಂತಹ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿ ಈ ಯೋಜನೆ ಹಮ್ಮಿಕೊಂಡಿದೆ ಎಂದು ಕಿನ್ನಿಗೋಳಿ ತಾ. ಪಂ. ಸದಸ್ಯ ದಿವಾಕರ ಕರ್ಕೇರಾ ಹೇಳಿದರು.
ಶುಕ್ರವಾರ ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದ ವಠಾರದಲ್ಲಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಗಂಡದ ಅರ್ಹ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಉಚಿತ ಅಡುಗೆ ಅನಿಲ ಸೌಲಭ್ಯ ವಿತರಿಸಿ ಮಾತನಾಡಿದರು.
ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಪಂಚಾಯಿತಿ ಸದಸ್ಯರಾದ ಸೇವಂತಿ, ರವೀಂದ್ರ ದೇವಾಡಿಗ, ಶಾಲಿನಿ, ಅತಿಕಾರಿ ಬೆಟ್ಟು ಗ್ರಾ. ಪಂ. ಸದಸ್ಯ ಜೀವನ್ ಶೆಟ್ಟಿ , ಶ್ರೀ ಬ್ರಹ್ಮಮುಗೇರ ದೈವಸ್ಥಾನದ ರಘುರಾಮ ಪುನರೂರು ಉಪಸ್ಥಿತರಿದ್ದರು. ಪ್ರಿಯಾಂಕಾ ಗ್ಯಾಸ್ ಕಂಪನಿಯ ರಂಗನಾಥ ಮಾಹಿತಿ ನೀಡಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಪಿಡಿಒ ಅರುಣ್ ಪ್ರದೀಪ್ ಡಿಸೋಜ ವಂದಿಸಿದರು.

Kinnigoli-07021701

Comments

comments

Comments are closed.

Read previous post:
ಫೆ. 14 ಉಳೆಪಾಡಿ – ಮಾರಿ ಪೂಜೆ

ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಯಿ ದೇವಳದಲ್ಲಿ ಫೆ. 14 ರಂದು ಮಂಗಳವಾರ ಕುಂಭಮಾಸದ ಮಾರಿ ಪೂಜೆ ನಡೆಯಲಿದೆ ಎಂದು ದೇವಳದ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Close