ಹರಿಕೃಷ್ಣ ಪುನರೂರು ನಾಡು ನುಡಿಯ ಸೇವಕ

ಕಿನ್ನಿಗೋಳಿ: ಸಾಹಿತ್ಯವನ್ನು ಗ್ರಾಮದಿಂದಲೇ ಎಲ್ಲಾಕಡೆ ಪಸರಿಸಲು ಸಂಘಟನಾ ಶಕ್ತಿ ಮೂಲಕ ಧರ್ಮದರ್ಶಿ ಹರಿಕೃಷ್ಣ ಪುನರೂರು ನೈಜ ನಾಡು ನುಡಿಯ ಸೇವಕರಾಗಿದ್ದಾರೆ. ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮುಖ್ಯ ಉದ್ದೇಶ ಯುವಜನರಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವುದು. ಎಂದು 8ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸಂಘಟಕ ಶೇಖರ ಅಜೆಕಾರು ಹೇಳಿದರು.
ಕಾರ್ಕಳದ ಮುದ್ರಾಡಿಯಲ್ಲಿ ನಡೆಯಲಿರುವ 8ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನೂರೂರು ಅವರ ಶುಭವಾಗಲಿ ನಿವಾಸದಲ್ಲಿ ಸಮ್ಮೇಳನಕ್ಕೆ ಅಕೃತವಾಗಿ ಆಹ್ವಾನ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ಸುಕುಮಾರ್ ಮೋಹನ್ ಮಾಹಿತಿ ನೀಡಿ, ಶ್ರೀ ವಿದ್ಯಾ ಸಂಸ್ಥೆ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ನಮ ತುಳುವೆರ್ ಕಲಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಫೆ.11ರಂದು ಮುದ್ರಾಡಿಯ ನಾಟ್ಕದೂರು ಬಯಲು ರಂಗ ಮಂದಿರದಲ್ಲಿ ಮುಸ್ಸಂಜೆ 5ರಿಂದ ಮರುದಿನ ಬೆಳಿಗ್ಗೆ 6ರವರೆಗೆ ನಿರಂತರವಾಗಿ ಸಾಹಿತ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭ 8ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನೂರೂರು, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಹೆಚ್.ಕೆ.ಉಷಾರಾಣಿ, ಅಧ್ಯಕ್ಷ ದೇವಪ್ರಸಾದ ಪುನರೂರು, ಶ್ರೇಯಾ ಪುನರೂರು, ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನರೇಂದ್ರ ಕೆರೆಕಾಡು ಉಪಸ್ಥಿತರಿದ್ದರು.

Kinnigoli-08021702

Comments

comments

Comments are closed.

Read previous post:
Kinnigoli-07021702
ಉಚಿತ ಸೈಕಲ್ ವಿತರಣೆ

ಕಿನ್ನಿಗೋಳಿ: ಸರಕಾರದ ಅನುದಾನದಿಂದ ನೀಡಲ್ಪಡುವ ಉಚಿತ ಸೈಕಲ್ಲುಗಳನ್ನು ಪೊಂಪೈ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ...

Close