ಮೂಲ್ಕಿ ಉಚಿತ ಸೈಕಲ್ ವಿತರಣೆ

ಮೂಲ್ಕಿ: ಗ್ರಾಮೀಣ ಬಡವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅವರಿಗೆ ಸೈಕಲುಗಳನ್ನು ನೀಡಲಾಗುತ್ತಿದ್ದು ಮುಂದಿನ ಫೆಬ್ರವರಿಯಿಂದ ಬಿಸಿಯೂಟದ ಜೊತೆಗೆ ವಾರದ ನಾಲ್ಕು ದಿನ ಮಕ್ಕಳಿಗೆ ಹಾಲು ಪೂರೈಸಲಾಗುವುದು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ಸರಕಾರಿ ಹೈಸ್ಕೂಲಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು. ಸರಕಾರದ ಸೌಲಭ್ಯ ಪಡೆದ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಕೆಯೊಂದಿಗೆ ಉನ್ನತ ವ್ಯಾಸಂಗ ಮಾಡಿ ಸರಕಾರಿ ಹುದ್ದೆಗಳನ್ನು ಅಲಂಕರಿಸಿದರೆ ಗ್ರಾಮೀಣ ಪ್ರದೇಶದ ಬಡತನ ನಿವಾರಣೆ ಸಾಧ್ಯ ಎಂದರು.
ಈ ಸಂದರ್ಭ ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಪುತ್ತುಬಾವು,ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಬೋಳ ಸುರೇಂದ್ರ ಕಾಮತ್, ಅತಿಕಾರಿಬೆಟ್ಟು ಗ್ರಾಮ ಪಂ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು,ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಿಷ್ಣುಮೂರ್ತಿ, ಹೌಸ್ಕೂಲ್ ಮುಖ್ಯ ಶಿಕ್ಷಕ ವಾಸುದೇವ ಭಾಗವತ್, ಉಪಸ್ಥಿತರಿದ್ದರು. ವಾಸುದೇವ ಭಾಗವತ್ ಸ್ವಾಗತಿಸಿದರು. ಶಿಕ್ಷಕಿ ರೋಸಿ ಫೆರ್ನಾಂಡೀಸ್ ಪ್ರಸ್ತಾವಿಸಿದರು. ಆಶಾ ನಿರೂಪಿಸಿದರು. ಪ್ರತಿಮಾ ವಂದಿಸಿದರು.

Mulki09021701

Comments

comments

Comments are closed.

Read previous post:
ಫೆ.12 ಹಳೆಯಂಗಡಿ ಕಾಲೇಜು ಸುವರ್ಣ ಸಂಭ್ರಮ

ಕಿನ್ನಿಗೋಳಿ : ಶಿಕ್ಷಣಾ ಕ್ಷೇತ್ರದಲ್ಲಿ 50 ಸಂವತ್ಸರಗಳ ಸಾರ್ಥಕ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಜ್ಞಾನದಾಹ ತಣಿಸಿ ಅವರ ಬಾಳನ್ನು ಬೆಳಗಿಸಿದ ಕರಾವಳಿಯ ಪ್ರಖ್ಯಾತ ಶಿಕ್ಷಣ ಸಂಸ್ಥೆ ಶ್ರೀ...

Close