ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ: ಶ್ರದ್ಧಾಕೇಂದ್ರಗಳು ಹಾಗೂ ಪರಿಸರವನ್ನು ಸ್ವಚ್ಚತಾ ಕಾಳಜಿಯೊಂದಿಗೆ ನಾವು ನಿಭಾಯಿಸಿದಾಗ ಮಾಲಿನ್ಯ ಮುಕ್ತ ಗ್ರಾಮ ನಗರವಾಗಿ ಎಲ್ಲರಿಗೂ ಮಾದರಿಯಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ನಾವು ಇತರಿಗೆ ಮಾರ್ಗದರ್ಶಿಗಳಾಗಬೇಕು ಎಂದು ಮೂಲ್ಕಿ ವಿಜಯಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮೀನಾ ಆಳ್ವ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ಯೂತ್ ರೆಡ್‌ಕ್ರಾಸ್ ಸಂಸ್ಥೆಗಳು ಕಟೀಲು ದೇವಳದ ಪರಿಸರದಲ್ಲಿ ಭಾನುವಾರ ನಡೆದ ಸ್ವಚ್ಚತಾ ಅಭಿಯಾನದಲ್ಲಿ ಮಾತನಾಡಿದರು.
ಮೂಲ್ಕಿ ವಿಜಯಾ ಕಾಲೇಜು ಪ್ರಿನ್ಸಿಪಾಲ್ ಡಾ. ಕೆ. ನಾರಾಯಣ ಪೂಜಾರಿ ಮಾತನಾಡಿ
ವಿದ್ಯಾರ್ಥಿಗಳು ಪಠ್ಯ ಪಠ್ಯೇತರ ಚಟುವಟಿಕೆಗಳೊಂದಿಗೆ ಸೇವಾ ಮನೋಭಾವನೆಯೊಂದಿಗೆ ಜನಪರ ಕಾಳಜಿಯ ಕಾರ್ಯ ಮಡಬೇಕು ಎಂದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ರಘುನಾಥ ಶೆಟ್ಟಿ, ಎನ್‌ಎಸ್‌ಎಸ್ ಅಕಾರಿ ಪ್ರೊ. ವೆಂಕಟೇಶ್ ಭಟ್, ಯೂತ್ ರೆಡ್ ಕ್ರಾಸ್ ಸಂಸ್ಥೆ ಮುಖ್ಯಸ್ಥ ನಾಗಾರಾಜ ರಾವ್, ವಿದ್ಯಾರ್ಥಿ ನಾಯಕರಾದ ಜಾವೆದ್, ಪ್ರಜ್ವಲ್ ಆಚಾರ್ಯ ಉಪಸ್ಥಿತರಿದ್ದರು. ಸುಮಾರು 150 ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು.

Kinnigoli-15021707

Comments

comments

Comments are closed.

Read previous post:
Mulki09021701
ಮೂಲ್ಕಿ ಉಚಿತ ಸೈಕಲ್ ವಿತರಣೆ

ಮೂಲ್ಕಿ: ಗ್ರಾಮೀಣ ಬಡವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅವರಿಗೆ ಸೈಕಲುಗಳನ್ನು ನೀಡಲಾಗುತ್ತಿದ್ದು ಮುಂದಿನ ಫೆಬ್ರವರಿಯಿಂದ ಬಿಸಿಯೂಟದ ಜೊತೆಗೆ ವಾರದ ನಾಲ್ಕು ದಿನ ಮಕ್ಕಳಿಗೆ ಹಾಲು ಪೂರೈಸಲಾಗುವುದು...

Close