ಫೆ. 19 ಹಳೆಯಂಗಡಿ – ದತ್ತಿ ಬಹುಮಾನ

ಕಿನ್ನಿಗೋಳಿ: ಹಳೆಯಂಗಡಿ ವಿದ್ಯಾವಿನಾಯಕ ಯುವಕ ಮಂಡಲ, ಯುವತಿ ಮತ್ತು ಮಹಿಳಾ ಮಂಡಲ ಹಾಗೂ ರಜತ ಸೇವಾ ಟ್ರಸ್ಟ್‌ಗಳ ಸಂಯುಕ್ತ ವಾರ್ಷಿಕೋತ್ಸವ ಹಾಗೂ ಎಚ್. ನಾರಾಯಣ ಸನಿಲ್ ದತ್ತಿ ಬಹುಮಾನ ಪ್ರಧಾನ ಸಮಾರಂಭ ಫೆ. 19ರಂದು ಸಂಜೆ 4.30ಕ್ಕೆ ಹಳೆಯಂಗಡಿ ರಾಮಾನುಗ್ರಹ ಸಭಾಗೃಹದಲ್ಲಿ ನಡೆಯಲಿದೆ.
ಸುರಗಿರಿ ದೇವಳದ ಸೀತಾರಾಮ ಶೆಟ್ಟಿ, ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ವಸಂತ ನಾಯಕ್ ಫಲಿಮಾರ್ಕರ್, ಮಿಥುನ್ ರೈ, ಸಂದೀಪ್ ಮರವೂರು, ಪಿ. ಸಂಜೀವ ರಾವ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ ಮತ್ತಿತರರು ಭಾಗವಹಿಸಲಿದ್ದಾರೆ.
ಅಂದು ಮಧ್ಯಾಹ್ನ 2 ಗಂಟೆಯಿಂದ ನೆಹರೂ ಯುವ ಕೇಂದ್ರದ ಸಹಯೋಗದಲ್ಲಿ ಜಾನಪದ ಉತ್ಸವವ ಆಯೋಜಿಸಲಾಗಿದೆ, ಜಾನಪದ ನೃತ್ಯ ಸ್ಪರ್ಧೆಯು ನಡೆಯಲಿದ್ದು ಸ್ಪರ್ಧಾಳುಗಳಿಗೆ ಮುಕ್ತ ಅವಕಾಶವಿದೆ. ವಿಜೇತ ತಂಡಕ್ಕೆ ರೂ. 5000 ದ್ವಿತೀಯ ತಂಡಕ್ಕೆ 3000 ನಗದು ಬಹುಮಾನ ಹಾಗೂ ಖಾಯಂ ಫಲಕ ನೀಡಲಾಗುವುದು ಎಂದು ವಿದ್ಯಾವಿನಾಯಕ ಮಂಡಲದ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-15021702
ಚಿಕಿತ್ಸೆಗೆ ನೆರವಾಗಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಸ್ಕೋಡಿ ಕಂಬಳಬೆಟ್ಟು ನಿವಾಸಿ ಸದಾಶಿವ ಮತ್ತು ವಸಂತಿ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಕೊನೆಯವಳಾದ ಸುಷ್ಮಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ತನ್ನ ಭವಿಷದ ಬಗ್ಗೆ...

Close