ಕಟೀಲು : ವಿಮರ್ಶಾಗೋಷ್ಟಿ

ಕಿನ್ನಿಗೋಳಿ : ಕನ್ನಡ ಸಾಹಿತ್ಯ ಪರಿಷತ್ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಸಂಘದ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಒಂದು ದಿನದ ವಿಮರ್ಶಾಗೋಷ್ಟಿ ಕಟೀಲು ಕಾಲೇಜಿನಲ್ಲಿ ನಡೆಯಿತು.
ಪುಸ್ತಕಗಳ ವಿಮರ್ಶೆ ಗೋಷ್ಟಿಯಲ್ಲಿ ವಿದ್ಯಾರ್ಥಿಗಳಾದ ಕುಮಾರಿ ಅನುಜ್ಞಾ, ರಂಜನ್, ಕುಮಾರಿ ಮಂಜುಳಾ, ಶ್ರೀವೈಷ್ಣವಿ, ಸಂಗೀತ, ದೀಕ್ಷಿತ ಕೆ. ಪ್ರಬಂಧಗಳನ್ನು ಮಂಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಕಟೀಲು ದೇವಳ ಕಾಲೇಜು ಪ್ರಿನ್ಸಿಪಾಲ್ ಪ್ರೊ.ಎಂ. ಬಾಲಕೃಷ್ಣ ಶೆಟ್ಟಿ, ಗೋವಿಂದದಾಸ ಕಾಲೇಜಿನ ವೈಸ್ ಪ್ರಿನ್ಸಿಪಾಲ್, ಕನ್ನಡ ವಿಭಾಗದ ಮುಖ್ಯಸ್ಥ, ವಿಕಾಸದ ಮಾಜಿ ಅಧ್ಯಕ್ಷ ಪ್ರೊ.ಕೃಷ್ಣಮೂರ್ತಿ, ತಾಲೂಕು ಘಟಕದ ಅಧ್ಯಕ್ಷೆಯಾದ ವಿಜಯಲಕ್ಷ್ಮೀ ಬಿ.ಶೆಟ್ಟಿ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಸಾಹಿತ್ಯ ಸಂಘದ ಸಂಯೋಜಕ ಡಾ. ಸತೀಶ್ ಸ್ವಾಗತಿಸಿದರು. ಕಾರ್ಯದರ್ಶಿ ರಂಜನ್ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಪೂರ್ಣಿಮ ವಂದಿಸಿದರು.

Kinnigoli-15021703

Comments

comments

Comments are closed.

Read previous post:
ಫೆ. 19 ಹಳೆಯಂಗಡಿ – ದತ್ತಿ ಬಹುಮಾನ

ಕಿನ್ನಿಗೋಳಿ: ಹಳೆಯಂಗಡಿ ವಿದ್ಯಾವಿನಾಯಕ ಯುವಕ ಮಂಡಲ, ಯುವತಿ ಮತ್ತು ಮಹಿಳಾ ಮಂಡಲ ಹಾಗೂ ರಜತ ಸೇವಾ ಟ್ರಸ್ಟ್‌ಗಳ ಸಂಯುಕ್ತ ವಾರ್ಷಿಕೋತ್ಸವ ಹಾಗೂ ಎಚ್. ನಾರಾಯಣ ಸನಿಲ್ ದತ್ತಿ ಬಹುಮಾನ...

Close