ಶ್ರೀ ಹರಿಪಾದ ಜಾರಂತಾಯ ದೈವಸ್ಥಾನ ಧಾರ್ಮಿಕ ಸಭೆ

ಕಿನ್ನಿಗೋಳಿ: ಧಾರ್ಮಿಕ ಕೇಂದ್ರಗಳು ಶಿಸ್ತು ಸಂಸ್ಕಾರದ ಸದ್ವಿಚಾರದ ಧರ್ಮ ಜಾಗೃತಿಯೊಂದಿಗೆ ಗ್ರಾಮ ಹಾಗೂ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ವಾನ್ ಪಂಜ ಭಾಸ್ಕರ ಭಟ್ ಹೇಳಿದರು.
ಪಂಜ ಕೊಯಿಕುಡೆ ಶ್ರೀ ಹರಿಪಾದ ಜಾರಂತಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮದ ಸಂದರ್ಭ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಾದ ಜೆನೆಟ್ ಮಿಶಾಲ್ ಪಿರೇರಾ, ಕೀರ್ತಿ, ಯತಿರಾಜ್, ಸುಶಾಂತ್ ಅಮೀನ್, ಸ್ಮಿತಾ, ಪ್ರತೀಕ್ಷ, ಲಕ್ಷ್ಮೀಶ ಎಮ್ ಶೆಟ್ಟಿ, ಕವಿತಾ ಎಮ್. ಶೆಟ್ಟಿ, ವಿಘ್ನೇಶ್ ಭಟ್, ದೀಕ್ಷಿತಾ.ಕೆ., ಸುಮಂತ್ ಸಿ. ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶ್ರೀ ಹರಿಪಾದ ಜಾರಂತಾಯ ದೈವಸ್ಥಾನ ಧರ್ಮದರ್ಶಿ ಗುತ್ತಿನಾರ್ ಭೋಜ ಶೆಟ್ಟಿ ನಲ್ಯಗುತ್ತು, ಮುಂಬಯಿ ಉದ್ಯಮಿ ಭುಜಂಗ ಶೆಟ್ಟಿ ನಲ್ಯಗುತ್ತು, ವಿಶ್ವನಾಥ ಶೆಟ್ಟಿ ಪಂಜಗುತ್ತು , ಉದ್ಯಮಿ ದಾಮೋದರ ಶೆಟ್ಟಿ ನಲ್ಯಗುತ್ತು, ಪ್ರಕಾಶ್ ಶೆಟ್ಟಿ ನಲ್ಯಗುತ್ತು ಮತ್ತಿತರರು ಉಪಸ್ಥಿತರಿದ್ದರು.

Kinnigoli-15021706

Comments

comments

Comments are closed.

Read previous post:
Kinnigoli-15021705
ಧರ್ಮದ ಮೂಲ ಸಂಸ್ಕೃತಿಗೆ ಚ್ಯುತಿ ಬರಬಾರದು

ಕಿನ್ನಿಗೋಳಿ: ಸನಾತನ ಧರ್ಮದ ಮೂಲ ಸಂಸ್ಕೃತಿಗೆ ಚ್ಯುತಿ ಬಾರದಂತೆ ಕಾರ್ಯಪ್ರವತ್ತರಾಗಿ ಭಕ್ತಿ ಶ್ರದ್ಧೆ, ನಿಷ್ಟೆಯಿಂದ ಭಗವಂತನನ್ನು ಆರಾಧನೆ ಮಾಡಿದಾಗ ದೇವರ ಅನುಗ್ರಹವು ಸಿಗುತ್ತದೆ. ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ಸು ದೊರಕುತ್ತದೆ...

Close