ಚಿಕಿತ್ಸೆಗೆ ನೆರವಾಗಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಸ್ಕೋಡಿ ಕಂಬಳಬೆಟ್ಟು ನಿವಾಸಿ ಸದಾಶಿವ ಮತ್ತು ವಸಂತಿ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಕೊನೆಯವಳಾದ ಸುಷ್ಮಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ತನ್ನ ಭವಿಷದ ಬಗ್ಗೆ ಉತ್ತಮ ಸಂತೃಪ್ತಿ ಜೀವನದ ಕನಸು ಕಂಡುಕೊಳ್ಳಬೇಕಾಗಿದ್ದ ಸುಷ್ಮಾ ಈದೀಗ ಚಿಂತಕ್ರಾಂತಳಾಗಿ ಯೋಚಿಸುತ್ತಾ ಅಂಗಾತ ಮಲಗಿದ ಪರಿಸ್ಥಿತಿಯಲ್ಲಿದ್ದಾಳೆ.
ಸುಷ್ಮ ಅವರಿಗೆ ಕಳೆದ ಎರಡು ವರ್ಷದ ಹಿಂದೆ ಮದುವೆಯಾಗಿದ್ದು, 8 ತಿಂಗಳ ಗರ್ಭಿಣಿಯಾಗಿರುವಾಗ ದೇಹದಲ್ಲಿ ರಕ್ತದೊತ್ತಡದ ಸಮಸ್ಯೆ ಕಂಡುಬಂದಿದ್ದು ವೈದ್ಯರು ಪರೀಕ್ಷಿಸಿದಾಗ ಕಿಡ್ನಿ ಸಮಸ್ಯೆ ಇರುವುದಾಗಿ ಶ್ರುತ ಪಟ್ಟಿತ್ತು. ತುಂಬು ಗರ್ಭಿಣಿಯಾಗಿದ್ದ ಕಾರಣ ಪ್ರಾಣಕ್ಕೆ ಅಪಾಯ ಇರುವುದರಿಂದ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಯಿತು. ಈ ಸಂದರ್ಭ ಮಗು ಮೃತ ಪಟ್ಟಿತ್ತು. ಅತೀ ಕಡು ಬಡತನದ ಕುಟುಂಬಕ್ಕೆ ಇದು ದೊಡ್ಡ ಅಘಾತ ತಂದೊಡ್ಡಿತ್ತು. ಎರಡು ಕಿಡ್ನಿಗಳ ಸಮಸ್ಯೆಯಿಂದ ಬಳಲುತ್ತಿದ್ದ ಸುಷ್ಮ ಅವರಿಗೆ ವಾರಕ್ಕೆ ಮೂರು ಬಾರಿಯಾದರೂ ಡಯಾಲಿಸಸ್ ಮಾಡಬೇಕಾದ ಅನಿವಾರ್ಯತೆ ಬಂದಿದ್ದು ಇದಕ್ಕಾಗಿ ವಾರಕ್ಕೆ ಸುಮಾರು 30 ಸಾವಿರದಷ್ಟು ಖರ್ಚು ಇರುದರಿಂದ ಈ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದೆ.

ಸುಷ್ಮ ಅವರ ತಂದೆ ಕ್ಷಯ ರೋಗದಿಂದ ಬಳಲುತ್ತಿದ್ದು ಅವರ ಚಿಕಿತ್ಸೆ ಖರ್ಚಿಗಾಗಿ ಕುಟುಂಬ ಪರದಾಡುತ್ತಿದೆ. ತಾಯಿ ವಸಂತಿ ಈ ಹಿಂದೆ ಬೀಡಿ ಕಟ್ಟುತ್ತಿದ್ದು ಬೆನ್ನು ನೋವಿನ ಸಮಸ್ಯೆಯಿಂದ ಬೀಡಿ ಕಟ್ಟಲು ಸಾದ್ಯವಿಲ್ಲದಂತಾಗಿದೆ. ಎರಡು ವರ್ಷದ ಹಿಂದೆ ಬ್ಯಾಂಕ್ ಸಾಲ ಮಾಡಿ ಮನೆ ಕಟ್ಟಿದ್ದು ಸಾಲ ಮರು ಪಾವತಿ ಮಾಡಲು ಕಷ್ಟ ಸಾಧ್ಯವಾಗಿದೆ. ಜೊತೆಗೆ ಮಗಳ ಮದುವೆಗೂ ಸಾಲ ಮಾಡಲಾಗಿತ್ತು. ಸುಷ್ಮಾ ಗಂಡ ಸುರೇಶ್ ದಿನಕೂಲಿ ಕೆಲಸ ಮಾಡುತ್ತಿದ್ದು ಸುಷ್ಮಾ ಅನಾರೋಗ್ಯದ ಬಳಿಕ ಚಿಕಿತ್ಸೆಗಾಗಿ ಅಲೆದಾಟವೇ ಹೆಚ್ಚಾಗಿದ್ದರಿಂದ ಕೆಲಸ ಮಾಡಲು ಸಾದ್ಯವಿಲ್ಲದಂತಾಗಿದೆ. ಚಿಕಿತ್ಸೆ ನೆರವಿಗಾಗಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಇದುವರೆಗೆ ಯಾವುದೇ ಸ್ಪಂದನೆ ನೆರವು ದೊರಕಿಲ್ಲ. ಇದೀಗ ಈ ಕುಟುಂಬ ದಾನಿಗಳ ಸಹಾಯ ಯಾಚಿಸುತ್ತಿದ್ದು ಸಹಾಯ ಮಾಡಲು ಇಚ್ಚಿಸುವವರು ಸುಷ್ಮಾ ಅವರಿಗೆ ಸಹಾಯ ನೀಡುವಂತೆ ಕುಟುಂಬಿಕರು ವಿನಂತಿಸಿಕೊಳ್ಳುತ್ತಿದ್ದಾರೆ.
ಸುಷ್ಮಾ ಟಿ.

I.F.S.C. code – corp 00255
ಖಾತೆ ಸಂಖ್ಯೆ- 025500101008355 ಕಾರ್ಪೋರೇಶನ್ ಬ್ಯಾಂಕ್ ಕಿನ್ನಿಗೋಳಿ
ಪೋನ್ ನಂಬರ್- 9741907710

Kinnigoli-15021702

Comments

comments

Comments are closed.

Read previous post:
Kinnigoli-15021701
ಕೆಮ್ರಾಲ್ ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಕೆಮ್ರಾಲ್ ಪಂಚಾಯಿತಿ, ಶ್ರೀ ವಿನಾಯಕ ಮಿತ್ರ ಮಂಡಲಿ ಪಕ್ಷಿಕೆರೆ ಹಾಗೂ ಸಾರ್ವಜನಿಕರಿಂದ ಪಕ್ಷಿಕೆರೆ ಪೇಟೆಯನ್ನು ಪ್ಲಾಸ್ಟಿಕ್ ಮುಕ್ತ ವಲಯ ವನ್ನಾಗಿ ಮಾಡುವ ಉದ್ದೇಶದಿಂದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು....

Close