ಧರ್ಮದ ಮೂಲ ಸಂಸ್ಕೃತಿಗೆ ಚ್ಯುತಿ ಬರಬಾರದು

ಕಿನ್ನಿಗೋಳಿ: ಸನಾತನ ಧರ್ಮದ ಮೂಲ ಸಂಸ್ಕೃತಿಗೆ ಚ್ಯುತಿ ಬಾರದಂತೆ ಕಾರ್ಯಪ್ರವತ್ತರಾಗಿ ಭಕ್ತಿ ಶ್ರದ್ಧೆ, ನಿಷ್ಟೆಯಿಂದ ಭಗವಂತನನ್ನು ಆರಾಧನೆ ಮಾಡಿದಾಗ ದೇವರ ಅನುಗ್ರಹವು ಸಿಗುತ್ತದೆ. ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ಸು ದೊರಕುತ್ತದೆ ಎಂದು ಎಳತ್ತೂರು ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್‌ಕುಮಾರ್ ಹೆಗ್ಡೆ ಹೇಳಿದರು.
ಕಿನ್ನಿಗೋಳಿ ಸಮೀಪದ ತಾಳಿಪಾಡಿ ಮಠದಲ್ಲಿ 10ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಳದ ಆಡಳಿತ ಮೊಕ್ತೇಸರ ರಘುನಾಥ್ ಎಲ್. ವಿ ಅಧ್ಯಕ್ಷತೆ ವಹಿಸಿ ಮಾತನಾಡಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ ಧರ್ಮಜಾಗೃತಿ ಕೆಲಸಕಾರ್ಯಗಳು ನಿರಂತರ ನಡೆಯಬೇಕು ಎಂದು ಹೇಳಿದರು.
ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಯಿ ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್, ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದ ಅರ್ಚಕ ಹಾಗೂ ಮೊಕ್ತೇಸರ ವೈ. ವಿ. ಗಣೇಶ್ ಭಟ್ , ದಾಮಸಕಟ್ಟೆ ಕಿರೆಂ ರೆಮೆದಿ ಅಮ್ಮನವರ ಚರ್ಚ್ ಧರ್ಮ ಗುರು ಫಾ. ವಿಕ್ಟರ್ ಡಿಮೆಲ್ಲೊ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಾದ ಆಡಳಿತ ಮೊಕ್ತೇಸರ ಚಂದ್ರಹಾಸ ಕೆ. ಅಮೀನ್ , ಶಾಂತಿನಗರ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ ಉಪಸ್ಥಿತರಿದ್ದರು.
ದಯಾನಂದ ಭಟ್ ಪ್ರಸ್ತಾವನೆಗೈದು ಸ್ವಾಗತಿಸಿದರು. ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-15021705

Comments

comments

Comments are closed.

Read previous post:
Kinnigoli-15021704
ರಾಮಚಂದ್ರ ಭಟ್, ಅಪ್ಪಯ್ಯ ಮಣಿಯಾಣಿ ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ದಾಮಸಕಟ್ಟೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ನಡೆದ ಬಯಲಾಟ ಸಂದರ್ಭ ಜ್ಯೋತಿಷಿ ಧಾರ್ಮಿಕ ನೇತಾರ ರಾಮಚಂದ್ರ ಭಟ್ ಶಿಮಂತೂರು...

Close