ಏಳಿಂಜೆ ಮಹಾಗಣಪತಿ ದೇವಳ ಧ್ವಜಾರೋಹಣ

ಕಿನ್ನಿಗೋಳಿ: ದ.ಕ. ಉಡುಪಿ ಜಿಲ್ಲೆಗಳ ಕರಾವಳಿಯ ದೇವಳಗಳು ದೈವಿಕ ಶಕ್ತಿ ಹಾಗೂ ವಿಶಿಷ್ಟತೆ ಹೊಂದಿವೆ. ಕಟೀಲು, ಮುಂಡ್ಕೂರು, ಏಳಿಂಜೆ ದೇವಳಗಳು ಶಕ್ತಿ ಕೇಂದ್ರಗಳಾಗಿ ಕರ್ಯ ನಿರ್ವಹಿಸುತ್ತವೆ ಎಂಬುದಕ್ಕೆ ಕೆಲವು ಜ್ವಲಂತ ಸಾಕ್ಷಿಗಳಿವೆ ಎಂದು ಬಾಲಿವುಡ್ ಚಿತ್ರನಟ ನಾನಾ ಪಾಟೇಕರ್ ಹೇಳಿದರು.
ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಳದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ದೇವಳದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಅನುವಂಶಿಕ ಅರ್ಚಕರಾದ ವೈ. ಗಣೇಶ್ ಭಟ್, ಅರ್ಚಕ ಸದಾನಂದ ಭಟ್, ವರುಣ್ ಭಟ್, ದೇವಳದ ಆಡಳಿತ ಮೊಕ್ತೇಸರ ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ, ಅಂಗಡಿ ಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟ್ಟಿ, ಏಳಿಂಜೆ ಜಾರಂದಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಸದಾನಂದ ಶೆಟ್ಟಿ ಭಂಡಸಾಲೆ, ಸುಧಾಕರ ಶೆಟ್ಟಿ ಮುಂಡ್ಕೂರು ಮುಲ್ಲಡ್ಕ, ಪಟ್ಟೆ ಜಾರಂದಾಯ ದೈವಸ್ಥಾನ ಆಡಳಿತ ಮೊಕ್ತೇಸರ ರಘರಾಮ ಅಡ್ಯಂತಾಯ, ಅನಿಲ್ ಶೆಟ್ಟಿ ಕೋಂಜಾಲಗುತ್ತು, ಕೆ. ಭುವನಾಭಿರಾಮ ಉಡುಪ, ವೈ ಯೋಗೀಶ್ ರಾವ್, ವೈ. ಕೃಷ್ಣ ಸಾಲ್ಯಾನ್, ಸುಧಾಕರ ಶೆಟ್ಟಿ, ಭಾಸ್ಕರ ಶೆಟಿ , ಶರತ್ ಶೆಟ್ಟಿ ಮತ್ತು ಸಾಯಿನಾಥ ಶೆಟ್ಟಿ, ಲಕ್ಷಣ್ ಬಿ.ಬಿ, ಸುಧಾಕರ ಸಾಲ್ಯಾನ್, ಕೃಷ್ಣ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-17021701

Comments

comments

Comments are closed.

Read previous post:
Kinnigoli-15021706
ಶ್ರೀ ಹರಿಪಾದ ಜಾರಂತಾಯ ದೈವಸ್ಥಾನ ಧಾರ್ಮಿಕ ಸಭೆ

ಕಿನ್ನಿಗೋಳಿ: ಧಾರ್ಮಿಕ ಕೇಂದ್ರಗಳು ಶಿಸ್ತು ಸಂಸ್ಕಾರದ ಸದ್ವಿಚಾರದ ಧರ್ಮ ಜಾಗೃತಿಯೊಂದಿಗೆ ಗ್ರಾಮ ಹಾಗೂ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ವಾನ್ ಪಂಜ ಭಾಸ್ಕರ ಭಟ್ ಹೇಳಿದರು. ಪಂಜ ಕೊಯಿಕುಡೆ...

Close