ಶ್ರೀ ನಾರಾಯಣ ಸನಿಲ್ ಕಾಲೇಜು ಸುವರ್ಣ ಸಂಭ್ರಮ

ಕಿನ್ನಿಗೋಳಿ: ಶಿಕ್ಷಣ ಸಂಸ್ಥೆಗಳು ಎಲ್ಲಾ ಮತಧರ್ಮಗಳ ಏಕಮೇವ ದೇವಾಲಯಗಳಿದ್ದಂತೆ, ಸಮಾಜದ ಉತ್ತಮ ಸಾಧಕರನ್ನು ನಿರ್ಮಿಸುವುದು ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದರು
ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜು, ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುವರ್ಣ ಮಹೋತ್ಸವದ ಕೊಡುಗೆಯಾಗಿ ನಿರ್ಮಿಸಲಾದ ನಾರಾಯಣ ಸನಿಲ್ ರಂಗ ಮಂದಿರದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ *ಪೊನ್ನ ಕದಿರು* ವನ್ನು ನಿಟ್ಟೆ ವಿಶ್ವ ವಿದ್ಯಾಲಯ ಸಹ ಕುಲಾಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಬಿಡುಗಡೆಗೊಳಿಸಿ ಪ್ರತಿಭೆ ಪ್ರತಿಯೊಂದು ವಿದ್ಯಾರ್ಥಿಗಳಲ್ಲಿ ಇರುತ್ತದೆ ಅದನ್ನು ಪ್ರೋತ್ಸಾಹಿಸಿ ತಿದ್ದಿ ತೀಡುವ ಕೆಲಸ ಶಿಕ್ಷಕರು ಮತ್ತು ಹೆತ್ತವರು ಮಾಡಬೇಕು ಎಂದರು.
ಜಾನಪದ ವಿದ್ವಾಂಸ ಉಪನ್ಯಾಸಕ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ಮರಣ ಸಂಚಿಕೆಯ ಪ್ರಸ್ತಾವನೆಗೈದರು.
ಮಾಜಿ ಸಚಿವ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ ಉತ್ತಮ ಉಪನ್ಯಾಸಕ ಶಿಕ್ಷಕರಿಂದ ವೃಂದದಿಂದ ಮಕ್ಕಳ ಭವಿಷ್ಯ ಸದೃಡವಾಗಿ ರೂಪುಗೊಳ್ಳುತ್ತಿದೆ. ಮಕ್ಕಳು ವಿದ್ಯಾವಂತರಾದರೆ ಊರಿಗೆ ಗೌರವ, ನಾರಾಯಣ ಸನಿಲ್ ಅವರಿಂದ ಈ ಸಂಸ್ಥೆಗೆ ಬಹಳಷ್ಟು ಗೌರವ ಬಂದಿದೆ ಎಂದರು
ಈ ಸಂದರ್ಭ ನೂತನ ವೇದಿಕೆಯ ಇಂಜಿನೀಯರ್ ಚಂದ್ರಹಾಸ ಕಿನ್ನಿಗೋಳಿ ಮತ್ತು ಸ್ಮರಣ ಸಂಚಿಕೆಯ ಡಿಸೈನರ್ ಪ್ರಮೋದ್ ಆಚಾರ್ಯ ಅವರನ್ನು ಗೌರವಿಸಲಾಯಿತು.
ಕಾಲೇಜು ಪ್ರಿನ್ಸಿಪಾಲ್ ಗಿರಿಜವ್ವ ಮೆಣಸಿನಕಾಯಿ, ಶಿಕ್ಷಕರಾದ ಎಚ್.ಕೆ ಮಹಮ್ಮದ್, ಜಯಾನಂದ ಸುವರ್ಣ, ಶ್ರೀ ವಿಷ್ಣು ಮೂರ್ತಿ, ಸುವರ್ಣ ಮಹೊತ್ಸವದ ಅಂಗವಾಗಿ ವಿವಿಧ ಯೋಜನೆಗಳಿಗೆ ವಿಶೇಷ ಸಹಕಾರ ನೀಡಿರುವ ಮಹಾ ಪೋಷಕರಾದ ಪಂಜದ ಗುತ್ತು ಶಾಂತರಾಮ ಶೆಟ್ಟಿ, ಸೂರ್ಯಕುಮಾರ್ ಹಳೆಯಂಗಡಿ, ಪಡುಪಣಂಬೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಪ್ರಧಾನ ಪೋಷಕರಾದ ಚಂದ್ರಶೇಖರ ನಾನಿಲ್, ಪ್ರಕಾಶ್ ಶೆಟ್ಟಿ ಸುಮಾನಿಲಯ ಹಳೆಯಂಗಡಿ, ಯಶೋಧರ ಸಾಲಿಯಾನ್ ಪಂಚಪುಷ್ಪ ಹಳೆಯಂಗಡಿ, ಮಂಗಳೂರು ವುಡ್ ಸೈಡ್ ಆಡಳಿತ ನಿರ್ದೇಶಕರಾದ ಬಾಸ್ಕರ ಸಾಲಿಯಾನ್ ಮುಂಬೈ ಉದ್ಯಮಿ ಮುದ್ದಣ್ಣ ಅಂಚನ್ ಕಾಂತಣ್ಣ ಗುರಿಕಾರ ಯಾನೆ ರತ್ನಾಕರ ಶೆಟ್ಟಿಗಾರ್ ಪೋಷಕರಾದ ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಡಾ. ಶಿವಾನಂದ ಪ್ರಭು ಹಳೆಯಂಗಡಿ, ರಘು. ಪಿ ಶೆಟ್ಟಿ ಮುಂಬೈ, ಶಶೀಂದ್ರ ಸಾಲಿಯಾನ್ ಹಳೆಯಂಗಡಿ ಅವರನ್ನು ಸನ್ಮಾನಿಸಲಾಯಿತು ಪ್ರೌಡ ಶಾಲೆ ಮತ್ತು ಪದವಿಪೂರ್ವ ವಿಭಾಗದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು
ಮಾಜಿ ಸಚಿವ ಅಮರನಾಥ ಶೆಟ್ಟಿ, ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ. ಪಂ. ಸದಸ್ಯ ಜೀವನ್ ಪ್ರಕಾಶ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜ, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್ ದಾಸ್, ಪ್ರೌಢಶಾಲಾ ಹಿರಿಯ ಶಿಕ್ಷಕ ಮೈಕಲ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಬರ್ನಾಡ್ ಸ್ವಾಗತಿಸಿದರು, ಕಾಲೇಜು ಪ್ರಿನ್ಸಿಪಾಲ್ ಗಿರಿಜವ್ವ ಮೆಣಸಿನಕಾಯಿ ೫೦ ವರ್ಷಗಳ ವರದಿ ಮಂಡಿಸಿದರು. ಉಪನ್ಯಾಸಕ ಜಯಾನಂದ ಸುವರ್ಣ ವಂದಿಸಿದರು. ಸುಷ್ಮಾ ಹಳೆಯಂಗಡಿ ಕಾರ್ಯಕ್ರಮ ನಿರೂಪಿಸಿದರು

ಕಾಲೇಜು ಸುವರ್ಣ ಸಂಭ್ರಮದ ನೆನಪಿಗಾಗಿ ನಡೆದ ಪ್ರೌಢ ಶಾಲಾ ಹುಡುಗರ ವಾಲಿಬಾಲ್ ವಿಜೇತರಾದ ರೋಟರಿ ಪ್ರೌಢ ಶಾಲೆ ಮೂಡಬಿದಿರೆ, ಎ.ಎಮ್. ಎಸ್. ಕಡಬ, ನಾರಾಯನ ಗುರು ಪ್ರೌಢಶಾಲೆ ಮುಲ್ಕಿ, ಪ್ರೌಢ ಶಾಲಾ ಹುಡುಗಿಯರ ತ್ರೋಬಾಲ್ ವಿಜೇತರಾದ ಪ್ರತಿಭಾ ಪ್ರೌಢಶಾಲೆ ಪಟ್ಟೆ, ಸರಕಾರಿ ಪ್ರೌಢಶಾಲೆ ಪೆರ್ಮನ್ನೂರು ಬಬ್ಬುಕಟ್ಟೆ ಮಂಗಳೂರು, ಕೆಟ್ಟೆಲ್ ಮೆಮೊರಿಯಲ್ ಪ್ರೌಢ ಶಾಲೆ ಗೋರಿಗುಡ್ಡ ಮಂಗಳೂರು, ಪದವಿಪೂರ್ವ ಕಾಲೇಜು ಹುಡುಗರ ವಾಲಿಬಾಲ್ ವಿಜೇತರಾದ ವಿವೇಕ ಪಿ.ಯು. ಕಾಲೇಜು ಕೋಟ, ಆಳ್ವಾಸ್ ಪಿ.ಯು. ಕಾಲೇಜು ಮೂಡಬಿದಿರೆ, ಸೈಂಟ್ ಅಲೋಷಿಯಸ್ ಪಿ.ಯು. ಕಾಲೇಜು ಮಂಗಳೂರು, ಪದವಿಪೂರ್ವ ತ್ರೋಬಾಲ್ ವಿಜೇತರಾದ ಭಾರತ್ ಪಿ.ಯು. ಕಾಲೇಜು ಉಳ್ಳಾಲ, ಶ್ರೀಕೃಷ್ಣ ಪಿ.ಯು. ಕಾಲೇಜು ಪಟ್ಟೆ, ಸೈಂಟ್ ಆಗ್ನೇಸ್ ಪಿ.ಯು. ಕಾಲೇಜು ಮಂಗಳೂರು ಇವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.

Kinnigoli-17021705 Kinnigoli-17021706

Comments

comments

Comments are closed.

Read previous post:
Kinnigoli-17021704
ಅಭಯಚಂದ್ರ ಜೈನ್ – ತುಲಾಭಾರ ಸೇವೆ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಪಂಜ ಕೊಯಿಕುಡೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಮಾಜಿ ಸಚಿವ, ಶಾಸಕ ಅಭಯಚಂದ್ರ ಜೈನ್ ಅವರ ತುಲಾಭಾರ ಸೇವೆ ನಡೆಯಿತು. ಈ ಸಂದರ್ಭ ಪಂಜ...

Close