ಕ್ರೀಡೆಯಿಂದ ಭವಿಷ್ಯ :ನಿತಿನ್ ಮೂಲ್ಕಿ

ಕಿನ್ನಿಗೋಳಿ : ಕ್ರೀಡಾ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಭವಿಷ್ಯವನ್ನು ರೂಪಿಸಬಹುದು. ಗ್ರಾಮೀಣ ಭಾಗದ ಕ್ರೀಡಾಳುಗಳಿಗೆ ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ಮುಕ್ತವಾಗಿ ನೀಡುತ್ತಿರುವುದರಿಂದ ಅನೇಕ ಕ್ರೀಡಾಳುಗಳು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ತರಬೇತುದಾರ ಹಾಗೂ ಜಿಲ್ಲೆಯ ಪ್ರತಿಭಾವಂತ ಕ್ರಿಕೆಟ್ ಆಟಗಾರ ನಿತಿನ್ ಮೂಲ್ಕಿ ಹೇಳಿದರು.
ಹಳೆಯಂಗಡಿ ಬಳಿಯ ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಅಮೆಚೂರ‍್ಸ್ ಬಾಡ್ಮಿಂಟನ್ ಸ್ಪರ್ಧಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಮುಕ್ತ ಪುರುಷರ ಹಾಗೂ ಮಹಿಳೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಪಂದ್ಯಾಟದಲ್ಲಿ ವಿವಿಧ ಜಿಲ್ಲೆಯ 72 ಕ್ರೀಡಾಳುಗಳು ಭಾಗವಹಿಸಿದ್ದರು.
ಸ್ಪರ್ಧಾ ತೀರ್ಪುಗಾರ ವಿವೇಕ್, ವೀರೇಶ್, ಪದ್ಮಿನಿ ಉಡುಪಿ, ಭರತ್, ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ, ಪ್ರಮಿಳಾ ರೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-17021702

Comments

comments

Comments are closed.

Read previous post:
Kinnigoli-17021701
ಏಳಿಂಜೆ ಮಹಾಗಣಪತಿ ದೇವಳ ಧ್ವಜಾರೋಹಣ

ಕಿನ್ನಿಗೋಳಿ: ದ.ಕ. ಉಡುಪಿ ಜಿಲ್ಲೆಗಳ ಕರಾವಳಿಯ ದೇವಳಗಳು ದೈವಿಕ ಶಕ್ತಿ ಹಾಗೂ ವಿಶಿಷ್ಟತೆ ಹೊಂದಿವೆ. ಕಟೀಲು, ಮುಂಡ್ಕೂರು, ಏಳಿಂಜೆ ದೇವಳಗಳು ಶಕ್ತಿ ಕೇಂದ್ರಗಳಾಗಿ ಕರ್ಯ ನಿರ್ವಹಿಸುತ್ತವೆ ಎಂಬುದಕ್ಕೆ ಕೆಲವು...

Close