ಸಂಸ್ಥೆಗಳು ಅಭಿವೃದ್ದಿಗೆ ಮನಸ್ಸು ಮಾಡಬೇಕು

ಕಿನ್ನಿಗೋಳಿ: ಧನಾತ್ಮಕ ಚಿಂತನೆಯಿಂದ ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಪ್ರೋತ್ಸಾಹ, ಆರೋಗ್ಯ, ಕ್ರೀಡೆಗೆ ಉತ್ತೇಜನ ಕೊಡುವ ಮೂಲಕ ಗ್ರಾಮದ ಅಭಿವೃದ್ದಿಗೆ ಮನಸ್ಸು ಮಾಡಬೇಕು ಎಂದು ಮುಂಬಯಿ ಉದ್ಯಮಿ ಕೋಂಜಾಲುಗುತ್ತು ಅನಿಲ್ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷೀಜನಾರ್ದನ ಮಹಾಗಣಪತಿ ದೇವಳದ ವಠಾರದಲ್ಲಿ ಭಾನುವಾರ ನಡೆದ ಏಳಿಂಜೆ ನವಚೇತನ ಯುವಕ ಮಂಡಲದ 30 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಈ ಸಂದರ್ಭ ಹಿರಿಯ ಕೃಷಿಕ ಪಿಜಿನ ಪೂಜಾರಿ, ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ ಬಂಕೆಡಬಾವ , ಕ್ರೀಡಾ ಪ್ರತಿಭೆ ಪ್ರಹ್ಲಾದ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಏಳಿಂಜೆ ಕೋಂಜಾಲುಗುತ್ತು ದಿ. ಅಕ್ಕಿ ಸಂಕು ಶೆಟ್ಟಿ ಸ್ಮರಣಾರ್ಥ ಪ್ರತಿಭಾವಂತ ವಿದ್ಯಾರ್ಥಿಗಳಾದ ಅಕ್ಷಯ ಆಚಾರ್ಯ, ಸಪ್ನಾ, ರಕ್ಷಿತ್ ಸುವರ್ಣ, ಉಷಾ ನಿಡ್ಡೋಡಿ, ಸೋನಾ, ಪುನೀತ್ ಆರ್ ಶೆಟ್ಟಿಗಾರ್, ಜಾನಿನ್ ಹಿಲ್ದಾ ಮಿರಾಂಡ, ಚಾಂದನಿ, ಅಕ್ಷಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಏಳಿಂಜೆ ನವಚೇತನ ಯುವಕ ಮಂಡಲದ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ ಬಂಕೆಡಬಾವ ಅಧ್ಯಕ್ಷತೆ ವಹಿಸಿದ್ದರು.
ಮುಂಡ್ಕೂರು ಭಾರ್ಗವ ಜೇಸಿ ಅಧ್ಯಕ್ಷೆ ರಮ್ಯ ಅರುಣ್ ರಾವ್ ಉಪನ್ಯಾಸ ನೀಡಿದರು. ದೇವಳದ ಅನುವಂಶಿಕ ಅರ್ಚಕ ವೈ. ಗಣೇಶ್ ಭಟ್ ಶುಭ ಹಾರೈಸಿದರು.
ಏಳಿಂಜೆ ಶ್ರೀ ಲಕ್ಷೀಜನಾರ್ದನ ಮಹಾಗಣಪತಿ ದೇವಳದ ಆಡಳಿತ ಮೊಕ್ತೇಸರ ಕೊಂಜಾಲಗುತ್ತು ಪ್ರಭಾಕರ ಶೆಟ್ಟಿ, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಸಂಜೀವ ಶೆಟ್ಟಿ ನಂದನಮನೆ, ದಯಾನಂದ ಶೆಟ್ಟಿ, ಸುಧಾಕರ ಸಾಲ್ಯಾನ್, ಯೋಗೀಶ್ ರಾವ್, ಪ್ರಕಾಶ್ ಶೆಟ್ಟಿ ನಂದನಮನೆ ಮತ್ತಿತರರು ಉಪಸ್ಥಿತರಿದ್ದರು.
ಲಕ್ಷಣ್ ಬಿ.ಬಿ, ಸ್ವಾಗತಿಸಿದರು. ಪ್ರಸಾದ್ ಬಹುಮಾನ ವಿಜೇತರ ಪಟ್ಟಿ ನೀಡಿದರು. ವೈ ಕೃಷ್ಣ ಮೂಲ್ಯ ವಂದಿಸಿದರು.

Kinnigoli-18021701

Comments

comments

Comments are closed.

Read previous post:
Kinnigoli-17021705
ಶ್ರೀ ನಾರಾಯಣ ಸನಿಲ್ ಕಾಲೇಜು ಸುವರ್ಣ ಸಂಭ್ರಮ

ಕಿನ್ನಿಗೋಳಿ: ಶಿಕ್ಷಣ ಸಂಸ್ಥೆಗಳು ಎಲ್ಲಾ ಮತಧರ್ಮಗಳ ಏಕಮೇವ ದೇವಾಲಯಗಳಿದ್ದಂತೆ, ಸಮಾಜದ ಉತ್ತಮ ಸಾಧಕರನ್ನು ನಿರ್ಮಿಸುವುದು ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್...

Close