ಮಹಿಳೆಯರು ಪುರುಷರಷ್ಟೆ ಸಮಾನರು

ಕಿನ್ನಿಗೋಳಿ: ಇಂದಿನ ಕಾಲದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಪುರುಷರಷ್ಟೆ ಸಮಾನರಾಗಿ ಬೆಳೆಯುತ್ತಿದ್ದಾರೆ. ಮಹಿಳೆಯರು ಸಂಘಟಿತರಾಗಿ ಗ್ರಾಮದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಬೇಕು. ಎಂದು ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದ ಆಡಳಿತ ಮೊಕ್ತೇಸರ ಪ್ರಭಾಕರ ಶೆಟ್ಟಿ ಕೋಂಜಾಲುಗುತ್ತು ಹೇಳಿದರು.
ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷೀಜನಾರ್ದನ ಮಹಾಗಣಪತಿ ದೇವಳದ ವಠಾರದಲ್ಲಿ ಸೋಮವಾರ ನಡೆದ ಏಳಿಂಜೆ ಶ್ರೀ ದೇವಿ ಯುವತಿ ಮತ್ತು ಮಹಿಳಾ ಮಂಡಲದ ವಾರ್ಷಿಕೋತ್ಸ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಸಮಾಜ ಸೇವಕಿ ಸೆವ್ರಿನ್ ಲೋಬೊ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ಅಕ್ಷಯ ಆಚಾರ್ಯ, ಸಪ್ನಾ, ರಕ್ಷಿತ್ ಸುವರ್ಣ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ದೇವಳದ ಅನುವಂಶಿಕ ಅರ್ಚಕರಾದ ವೈ. ಗಣೇಶ್ ಭಟ್ ಶುಭ ಹಾರೈಸಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಮಾಜ ಸೇವಕಿ ಲೀಲಾ ಬಂಜನ್, ದಿವಾಕರ ಶೆಟ್ಟಿ ಕೋಂಜಾಲುಗುತ್ತು ಏಳಿಂಜೆ, ಸಂಜೀವ ಶೆಟ್ಟಿ ನಂದನಮನೆ, ದಯಾನಂದ ಶೆಟ್ಟಿ, ವೈ.ಯೋಗೀಶ್ ರಾವ್, ನೇತ್ರಾವತಿ ಎಸ್ ಶೆಟ್ಟಿ, ವತ್ಸಲಾ ಯೋಗೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಏಳಿಂಜೆ ಶ್ರೀ ದೇವಿ ಯುವತಿ ಮತ್ತು ಮಹಿಳಾ ಮಂಡಲ ಅಧ್ಯಕ್ಷೆ ರಂಜನಿ ಆರ್ ಕೋಟ್ಯಾನ್ ಸ್ವಾಗತಿಸಿದರು. ರಮ್ಯಾ ಆಚಾರ್ಯ ಬಹುಮಾನ ವಿಜೇತರ ಪಟ್ಟಿ ನೀಡಿದರು. ನಾಗಲಕ್ಷ್ಮೀ ಭಟ್ ವಂದಿಸಿದರು. ಸುಜಾತಾ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-18021702

Comments

comments

Comments are closed.

Read previous post:
Kinnigoli-18021701
ಸಂಸ್ಥೆಗಳು ಅಭಿವೃದ್ದಿಗೆ ಮನಸ್ಸು ಮಾಡಬೇಕು

ಕಿನ್ನಿಗೋಳಿ: ಧನಾತ್ಮಕ ಚಿಂತನೆಯಿಂದ ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಪ್ರೋತ್ಸಾಹ, ಆರೋಗ್ಯ, ಕ್ರೀಡೆಗೆ ಉತ್ತೇಜನ ಕೊಡುವ ಮೂಲಕ ಗ್ರಾಮದ ಅಭಿವೃದ್ದಿಗೆ ಮನಸ್ಸು ಮಾಡಬೇಕು ಎಂದು ಮುಂಬಯಿ ಉದ್ಯಮಿ ಕೋಂಜಾಲುಗುತ್ತು ಅನಿಲ್...

Close