ಲಯನ್ಸ್ – ಪತ್ರಿಕಾ ಗೋಷ್ಠಿ

ಕಿನ್ನಿಗೋಳಿ : 10ವರ್ಷಗಳ ಕಿರಿಯ ಅವಧಿಯ ಲಯನ್ಸ್ ಕ್ಲಬ್ ಗಳ ಸೇವಾ ವಿಭಾಗದಲ್ಲಿ ಹಳೆಯಂಗಡಿ ಲಯನ್ಸ್ ಕ್ಲಬ್ ದ್ವಿತಿಯ ಸ್ಥಾನಿಯಾಗಿ ಮೂಡಿರುವುದು ಶ್ಲಾಘನೀಯ ಎಂದು ಲಯನ್ಸ್ ಜಿಲ್ಲೆ 317 ಡಿ ಗವರ್ನರ್ ಎಂ.ಅರುಣ್ ಶೆಟ್ಟಿ ಹೇಳಿದರು.
ಹಳೆಯಂಗಡಿ ಲಯನ್ಸ್ ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಲಯನ್ಸ್ ಜಿಲ್ಲೆ 317 ಡಿ ಯ ವತಿಯಿಂದ ಪುತ್ತೂರು ಈಶ್ವರಮಂಗಲ ಪದವಿ ಪೂರ್ವ ಕಾಲೇಜಿಗೆ 35 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ಮತ್ತು ಮಂಗಳೂರು ನ್ಯಾಯಾಲಯದ ನ್ಯಾಯವಾದಿಗಳಿಗಾಗಿ ಡಿಜಿಟಲ್ ಲೈಬ್ರೆರಿ ನಿರ್ಮಿಸಲಾಗುವುದು ಎಂದರು.
ಹಳೆಯಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ ನಾನಿಲ್ ಮಾತನಾಡಿ ಹಳೆಯಂಗಡಿ ಹಾಗೂ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ರಹಿತ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವ ಯೋಜನೆ ಚಾಲನೆಯಲ್ಲಿದ್ದು ಕೆಲವು ಮನೆಗಳು ವಿದ್ಯುತೀಕರಣ ಗೊಂಡಿದೆ. ಇನ್ನುಳಿದ ಮನೆಗಳ ಬಗ್ಗೆ ಮಾಹಿತಿ ಪಡೆಯುವ ಯೋಜನೆ ಜಾರಿಯಲ್ಲಿದೆ. ಸುರತ್ಕಲ್ ರೈಲ್ವೇ ನಿಲ್ದಾಣದಲ್ಲಿ ಸಾಮಾನ್ಯ ಬೋಗಿ ನಿಲುಗಡೆಯ ಸ್ಥಳದಲ್ಲಿ ಬಿಸಿಲು ಹಾಗೂ ಮಳೆಯ ಬವಣೆ ತಪ್ಪಿಸಲು ರೂ 1ಲಕ್ಷ 80ಸಾವಿರ ವೆಚ್ಚದ 48 ಅಡಿ ಉದ್ದದ ಸುಸಜ್ಜಿತ ಛಾವಣಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಮೂಲ್ಕಿ ನಿಲ್ದಾಣಕ್ಕೂ ಈ ಸೇವೆ ನೀಡಲಾಗುವುದು ಎಂದರು.
ಹಳೆಯಂಗಡಿ ಲಯನ್ಸ್ ಅಧ್ಯಕ್ಷ ಬ್ರಿಜೇಶ್ ಕುಮಾರ್ ಮಾತನಾಡಿ ಸದಸ್ಯರು ಹಾಗೂ ಸಮಾಜದ ದೇಣಿಗೆಯಿಂದ ಸುಮಾರು 12 ಲಕ್ಷಕ್ಕೂ ಅಧಿಕ ಸೇವೆಯನ್ನು ಸಮಾಜಕ್ಕೆ ಅರ್ಪಿಸಲಾಗಿದೆ. ಗ್ರಾಮೀಣ ಅರ್ಹ ಪಲಾನುಭವಿಗಳನ್ನು ಗುರುತಿಸಿ ಸೇವೆ ನೀಡಲಾಗಿದೆ ಎಂದರು.
ಈ ಸಂದರ್ಭ ಪ್ರಾಂತೀಯ ಅಧ್ಯಕ್ಷ ಮೊದಿನ್‌ಕುಂಜ್ಞಿ.ವಲಯ ಅಧ್ಯಕ್ಷ ಮೋಹನ್ ಸುವರ್ಣ, ಸದಸ್ಯರಾದ ವಸಂತ ಬೆರ್ನಾಡ್, ವಾಸು ನಾಯ್ಕ್, ನಿಖಿಲ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-180217011

 

Comments

comments

Comments are closed.

Read previous post:
Kinnigoli-180217010
2088 ನಾರಿಕೇಲ ಅಷ್ಟದ್ರವ್ಯ ಮಹಾ ಗಣಯಾಗ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷೀಜನಾರ್ಧನ ಮಹಾಗಣಪತಿ ದೇವಳದಲ್ಲಿ ಮಂಗಳವಾರ ಅಂಗಾರಿಕಾ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ನವ ನಿರ್ಮಿತ 11 ಯಾಗ ಕುಂಡದಲ್ಲಿ...

Close