ತಾ.19 ಕಟೀಲು ದುರ್ಗಾಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್ ಶಿಲಾನ್ಯಾಸ

Kateel-Hospitalಕಟೀಲು ಪರಿಸರದ 10 ಗ್ರಾಮಗಳ ಜನತೆಗೆ ಮಣಿಪಾಲ್ ಆರೋಗ್ಯ ಸುರಕ್ಷಾ ಯೋಜನೆಯಡಿ ಉಚಿತ ಸೇವೆ
ಕಟೀಲು : ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ವಿದ್ಯಾದಾನ, ಅನ್ನದಾನ, ಯಕ್ಷಗಾನಗಳಿಂದಾಗಿ ಗಮನ ಸೆಳೆದಿದ್ದು ಈದೀಗ ದೇವಳದ ಪರಿಸರದ ಗ್ರಾಮೀಣ ಪ್ರದೇಶದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ತಲೆ ಎತ್ತಲಿದೆ. ತಾ.19ರಂದು ಸಂಜೆ ಶಿಲಾನ್ಯಾಸ ಕಾರ‍್ಯಕ್ರಮ ನಡೆಯಲಿದ್ದು, ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ ನಡ್ದ, ರಾಜ್ಯ ಆರೋಗ್ಯ ಸಚಿವ ಕೆ. ಆರ್. ರಮೇಶ್ ಕುಮಾರ್ ಹಾಗೂ ವಿವಿಧ ಸಚಿವರು ಭಾಗವಹಿಸಲಿದ್ದಾರೆ.
ಮುಂಬೈನ ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಈ ಆಸ್ಪತ್ರೆಯ ಕನಸನ್ನು ನನಸಾಗಿಸಲಿದ್ದಾರೆ. ಇದರ ಅಧ್ಯಕ್ಷರಾದ ಕಟೀಲು ಡಾ. ಸುರೇಶ್ ರಾವ್ ಈಗಾಗಲೇ ಕಟೀಲಿನಲ್ಲಿ ಸ್ನಾತಕೋತ್ತರ ಸಂಸ್ಕೃತ ಶಿಕ್ಷಣಕ್ಕಾಗಿ ವಿದ್ಯಾಲಯ ಕೊಠಡಿ, ವಸತಿ ನಿಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ವರ್ಷಂಪ್ರತಿ ಮಕ್ಕಳಿಗಾಗಿ ಕಟೀಲಿನಲ್ಲಿ ವಸಂತವೇದ ಶಿಬಿರವನ್ನು ಆಯೋಜಿಸುತ್ತಿದ್ದಾರೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ. ಡಾ. ಸುರೇಶ್ ರಾವ್ ಮುಂಬೈ ಬ್ರಾಹ್ಮಣ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಕಟೀಲಿನಲ್ಲಿ ವಿಪ್ರಸಮಾವೇಶವನ್ನು ಆಯೋಜಿಸಿದ್ದಲ್ಲದೆ, ಬ್ರಾಹ್ಮಣ ಸಂಸ್ಕಾರಗಳ ತೌಳವ ನಿತ್ಯಾನುಷ್ಟಾನಂ ಎಂಬ ಸಿಡಿಯನ್ನೂ ಪ್ರಕಟಿಸಿದ್ದಾರೆ. ಇದೇ ಟ್ರಸ್ಟ್ ಕಟೀಲಿನ ಅಜಾರಿನಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿ ಕಟೀಲು ದೇವರಿಗೆ ಸಮರ್ಪಿಸಲಿದೆ. ಮಣಿಪಾಲ ವಿಶ್ವವಿದ್ಯಾನಿಲಯದವರು ಆಸ್ಪತ್ರೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಶ್ರೀ ಕ್ಷೇತ್ರ ಕಟೀಲು ಆರೋಗ್ಯ ಕ್ಷೇತ್ರದಲ್ಲೂ ಮಹತ್ತರ ಹೆಜ್ಜೆ ಇಡಲಿದೆ.
ನೂರು ಹಾಸಿಗೆಯ ಚಾರಿಟೇಬಲ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕ, ಪ್ರಯೋಗಾಲಯ, ಕ್ಷ ಕಿರಣ, ಸೊನೋಗ್ರಾಫಿ, ೨ಡಿ ಎಕೋ, ಸಿಟಿ ಸ್ಕ್ಯಾನ್ ಮುಂತಾದ ರೋಗ ನಿರ್ಣಯ ಸೇವೆಗಳೊಂದಿಗೆ ಹೊರರೋಗಿ ಸೇವೆಗಳು ಲಭ್ಯವಿರಲಿವೆ. ಡಯಾಲಿಸೀಸ್ ಸೇವೆ, ನಾಲ್ಕು ಪ್ರಮುಖ ಅಪರೇಷನ್ ಥಿಯೇಟರ್, ಆಂಬ್ಯುಲೆನ್ಸ್, ಹೆರಿಗೆ ಸೌಲಭ್ಯ ಇರಲಿದೆ. ಕಟೀಲು ಪರಿಸರದ 10 ಗ್ರಾಮಗಳ ಆರ್ಥಿಕವಾಗಿ ಹಿಂದುಳಿದ ಜನರಿಗೆ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯಡಿಯಲ್ಲಿ ಉಚಿತ ಸೇವೆ ಈ ಆಸ್ಪತ್ರೆಯಲ್ಲಿ ಲಭ್ಯವಿರಲಿದೆ.

Comments

comments

Comments are closed.

Read previous post:
Kinnigoli-180217012
ಕವತ್ತಾರು – ವರ್ಷಾವ ನೇಮೋತ್ಸವ

ಕಿನ್ನಿಗೋಳಿ: ಕವತ್ತಾರು ಶ್ರೀ ಜೋಗಿದೊಟ್ಟು ಸಾವಿರಾಳು ಧೂಮಾವತಿ ದೈವಸ್ಥಾನದ ವರ್ಷಾವ ನೇಮೋತ್ಸವದ ಪ್ರಯುಕ್ತ ಧೂಮಾವತಿ ಬಂಟ ದೈವಗಳ ನೇಮೋತ್ಸವ ಹಾಗೂ ಬಂಡಿ, ದೇವಿ ಭೇಟಿ, ಆರಾಟ ಸೇವೆ ನಡೆಯಿತು.

Close