ಆತಂಕಕ್ಕೆ ಎಡೆಮಾಡಿದ ರಕ್ತದ ಕಲೆಗಳು

ಕಿನ್ನಿಗೋಳಿ : ಮೂಲ್ಕಿ -ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆರೆಕಾಡು ಬಸ್ಸು ನಿಲ್ದಾಣದಲ್ಲಿ ರಕ್ತದಕಲೆಗಳು, ರಕ್ತಸಿಕ್ತ ಮನುಷ್ಯನ ಕಾಲಿನ ಗುರುತು ಮತ್ತು ತಲೆಕೂದಲುಗಳು ಕಂಡು ಬಂದಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಸ್ಥಳೀಯ ವ್ಯಕ್ತಿಯೊರ್ವರು ಬಸ್ಸಿಗೆ ಕಾದು ಕುಳಿತುಕೊಳ್ಳಲು ನಿಲ್ದಾಣಕ್ಕೆ ಬಂದಾಗ ಬಸ್ಸು ನಿಲ್ದಾಣದ ಒಳಗಡೆ ವ್ಯಾಪಕವಾಗಿ ರಕ್ತದ ಕಲೆಗಳು ನೋಡಿ ಭಯಭೀತರಾಗಿ ತಕ್ಷಣ ಮುಲ್ಕಿ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಮೂಲ್ಕಿ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ತದ ಕಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಮೂಲ್ಕಿ ಹಾಗೂ ಕಿನ್ನಿಗೋಳಿ ಆಸ್ಪತ್ರೆಗಳಲ್ಲಿ ಈ ಬಗ್ಗೆ ಮಾಹಿತಿ ವಿಚಾರಿಸುವಾಗ ಕೆರೆಕಾಡು ನಿವಾಸಿ ಸುಧಾಕರ ಆಚಾರ್ಯ ಎಂಬವರು ಕುಡಿತದ ಅಮಲಿನಲ್ಲಿ ಶುಕ್ರವಾರ ರಾತ್ರಿ ಬಸ್ಸು ನಿಲ್ದಾಣದಲ್ಲಿ ಬಿದ್ದು ಗಂಭೀರ ಗಾಯಗೊಂಡು ಮೂಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಾದ ಬಗ್ಗೆ ತಿಳಿದು ಬಂದಿದೆ. ಇದರಿಂದ ಸಾರ್ವಜನಿಕರ ಮನದಲ್ಲಿದ್ದ ಕೊಲೆ ಶಂಕೆ ಗುಮಾನಿ ದೂರವಾಯಿತು.

Kinnigoli-180217013

 

Comments

comments

Comments are closed.

Read previous post:
Kateel-Hospital
ತಾ.19 ಕಟೀಲು ದುರ್ಗಾಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್ ಶಿಲಾನ್ಯಾಸ

ಕಟೀಲು ಪರಿಸರದ 10 ಗ್ರಾಮಗಳ ಜನತೆಗೆ ಮಣಿಪಾಲ್ ಆರೋಗ್ಯ ಸುರಕ್ಷಾ ಯೋಜನೆಯಡಿ ಉಚಿತ ಸೇವೆ ಕಟೀಲು : ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ವಿದ್ಯಾದಾನ, ಅನ್ನದಾನ, ಯಕ್ಷಗಾನಗಳಿಂದಾಗಿ...

Close