ಓದು, ಬರಹ ಅಭಿವ್ಯಕ್ತಿ ಮಾಸಾಚರಣೆ

ಕಿನ್ನಿಗೋಳಿ: ವಿದ್ಯಾರ್ಥಿಗಳು ಓದು ಬರಹ ಅಭಿವ್ಯಕ್ತೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭಾ ಸಂಪನ್ನರಾಗಬೇಕು ಎಂದು ದ.ಕ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು.
ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಕ್ಲಸ್ಟರ್ ಮಟ್ಟದ ಓದು ಬರಹ ಅಭಿವ್ಯಕ್ತಿ ಮಾಸಾಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರಿ ಮಕ್ಕಳಲ್ಲಿ ಪ್ರತಿಭೆ ಇದೆ. ಪಠ್ಯ ವಿಷಯ ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟು ನಡೆಸುವ ಓದು, ಬರಹ ಅಭಿವ್ಯಕ್ತಿ ಮಾಸಾಚರಣೆಯನ್ನು ಈ ತಿಂಗಳು ಹಮ್ಮಿಕೊಂಡಿದ್ದು ಈ ಸ್ಪರ್ಧೆಯ ಸಂಪೂರ್ಣ ಪ್ರಯೋಜನವನ್ನು ಮಕ್ಕಳು ಪಡೆಯಲಿ ಎಂದು ಮಂಗಳೂರು ಉತ್ತರ ವಲಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಗೀತಾ ಹೇಳಿದರು.
ಐಕಳ ಗ್ರಾ. ಪಂ. ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಕ್ಲಸ್ಟರ್ ಸಿ.ಆರ್.ಪಿ ಜಯಲಕ್ಷ್ಮೀ, ಗ್ರಾ.ಪಂ ಸದಸ್ಯೆ ದಯಾವತಿ, ಸುಗುಣ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಕುಶಾಲ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಜುಲೇಟ್ ಸ್ವಾಗತಿಸಿ, ಸ್ಮಿತಾ ವಂದಿಸಿದರು. ವೀಡಾ ಮರಿಯಾ ಮತ್ತು ಮಾದೇಶ ಕಾರ್ಯಕ್ರಮ ನಿರೂಪಿಸಿದರು.

Kinnigoli-18021704 Kinnigoli-18021705 Kinnigoli-18021706 Kinnigoli-18021707Kinnigoli-18021708

Kinnigoli-18021709

Comments

comments

Comments are closed.

Read previous post:
Kinnigoli-18021703
ಕೊಯಿಕುಡೆ ವರ್ಷಾವದಿ ನೇಮೋತ್ಸವ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಕೊಯಿಕುಡೆ ಹರಿಪಾದೆ ಶ್ರೀ ಜಾರಂತಾಯ ದೈವಸ್ಥಾನದ ವರ್ಷಾವದಿ ನೇಮೋತ್ಸವ ನಡೆಯಿತು.  

Close