ಕೆಂಚನಕೆರೆ ಯಕ್ಷಗಾನ – ಸನ್ಮಾನ

ಕಿನ್ನಿಗೋಳಿ:  ಕೆಂಚನಕೆರೆ ಚಂದು ಛಾಯ ಮುಂಭಾಗದಲ್ಲಿ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳದವರ ಬಯಲಾಟ ಸಂದರ್ಭ ಹಿರಿಯ ಹವ್ಯಾಸಿ ಭಾಗವತ ಕೆಂಚನಕೆರೆ ದಿ. ದೂಜ ಯಾನೆ ಬೂಬ ಶೆಟ್ಟಿ ಅವರ ನೆನೆಪಿಗಾಗಿ ಯಕ್ಷಗಾನದ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತ, ಹಿರಿಯ ಪೌರೋಹಿತ್ಯ ಯಕ್ಷಗಾನ ಹವ್ಯಾಸಿ ಕಲಾವಿದ ಕೆ. ವಿ. ಕೃಷ್ಣ ಭಟ್ ಕಡಂದಲೆ, ಕಟೀಲು ಮೇಳದ ಮುಖ್ಯ ಭಾಗವತ ಕುಬಣೂರು ಶ್ರೀಧರ ರಾವ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ದ.ಕ. ಸಂಸದ ನಳಿನ್ ಕುಮಾರ್, ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಸೇವಾಕರ್ತ ತಿಮ್ಮಪ್ಪ ಶೆಟ್ಟಿ, ಮುಂಬಯಿ ಉದ್ಯಮಿ ಸತೀಶ್ ಬಿ. ಶೆಟ್ಟಿ, ಮೋಹನದಾಸ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ ಉಪಸ್ಥಿತರಿದ್ದರು.

Kinnigoli-20021702

Comments

comments

Comments are closed.

Read previous post:
Kinnigoli-20021701
ಪ್ರಕೃತಿ ವಿಕೋಪ -ಚೆಕ್ ವಿತರಣೆ

ಕಿನ್ನಿಗೋಳಿ : ಪ್ರಕೃತಿ ವಿಕೋಪ ಯೋಜನೆಯಡಿಯಲ್ಲಿ ಮಂಜೂರಾದ ರೂ. 101100 ಚೆಕನ್ನು ಬಿಪಾತುಮ್ಮ ಮೂಡುಶೆಡ್ಡೆ ಅವರಿಗೆ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ವಿತರಿಸಿದರು. ಈ ಸಂದರ್ಭ ಮೂಡದ...

Close