ಕಟೀಲು ದುರ್ಗಾ ಸಂಜೀವನಿ – ಆಸ್ಪತ್ರೆ ಶಿಲನ್ಯಾಸ

ಕಿನ್ನಿಗೋಳಿ: ಆಹಾರ ಮತ್ತು ವಿಹಾರ ಬಗ್ಗೆ ಜಾಗೃತರಾಗಬೇಕು. ಪುರಾತನ ಸಂಸ್ಕ್ರತಿ ಸಂಸ್ಕಾರ ಆಚಾರ ವಿಚಾರಗಳು ಮಾನವನ ಮನಸ್ಸನ್ನು ಸುಂಸ್ಕ್ರತರನ್ನಾಗಿಸಿ ಆರೋಗ್ಯವಂತರನ್ನಾಗಿ ಮಾಡಬಲ್ಲದು. ಎಂದು ಜಗದ್ಗುರು ಮಧ್ವಾಚಾರ್ಯ ಮೂಲ ಸಂಸ್ಥಾನಮ್ ಆದಮಾರು ಮಠ ಉಡುಪಿ ಮಠಾದೀಶರಾದ ಶ್ರೀಶ್ರೀಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ, ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಮುಂಬಾಯಿ ಸಂಜೀವನಿ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಕಟೀಲು ಅಜಾರು ಬಳಿ ನಿರ್ಮಾಣಗೊಳ್ಳುವ ದುರ್ಗಾ ಸಂಜೀವನಿ ಚಾರಿಟೇಬಲ್ ಆಸ್ಪತ್ರೆಯ ಶಿಲನ್ಯಾಸ ಸಮಾರಂಭದಲ್ಲಿ ಮಾತನಾಡಿದರು.
ಅರಣ್ಯ ಜೀವಿ ಶಾಸ್ತ್ರ ಮತ್ತು ಪರಿಸರ ವಿಭಾಗದ ಸಚಿವ ರಮಾನಾಥ ರೈ ದೀಪ ಬೆಳಗಿಸಿ ಮಾತನಾಡಿ ಸ್ವಾಸ್ಥ್ಯಭರಿತ ಆರೋಗ್ಯ ನಮ್ಮದಾಗಬೇಕಾದರೆ ನಿಯಮಿತ ಪೌಷ್ಟಿಕತೆಯ ಆಹಾರ ಹಾಗೂ ಪರಿಸರ ಸ್ನೇಹಿ ವಾತವಾರಣವಿರಬೇಕು. ಮಾಲಿನ್ಯ ಮುಕ್ತ ಸ್ವಚ್ಚ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಸಹಕರಿಸಬೇಕು. ಗ್ರಾಮೀಣ ಭಾಗದಲ್ಲಿ ಇಂತಹ ಆಸ್ಪತ್ರೆ ನಿರ್ಮಾಣ ಮಾಡುವುದು ಶ್ಲಾಘನೀಯ ಎಂದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಕೆ. ಅನಂತಪದ್ಮನಾಭ ಆಸ್ರಣ್ಣ ಶುಭಾಶಂಸನೆಗೈದರು.
ಮಾಜಿ ಸಚಿವ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಅಕ್ವಾಎಟಿಎಮ್ ಸ್ವಚ್ಚ ಕಾರ್ಡ್‌ಗಳನ್ನು ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ಕೆ. ಅಭಯಚಂದ್ರ, ಡಾ. ಸುರೇಶ್ ರಾವ್ ಅವರಿಗೆ ಸ್ವಚ್ಚ ಕಾರ್ಡ್ ನೀಡಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಶ್ರೀಪತಿ ರಾವ್ ಆರೋಗ್ಯ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ. ಸದಸ್ಯ ಸುಕುಮಾರ್ ಸನಿಲ್, ಕಟೀಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಎಂ.ಆರ್.ಪಿ.ಎಲ್. ಸಂಸ್ಥೆಯ ಉಪಾಧ್ಯಕ್ಷ ಹರಿಕುಮಾರ್, ರಾಷ್ಟ್ರೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ, ಮಣಿಪಾಲ ವಿಶ್ವವಿದ್ಯಾಲಯ ಪರ ಕುಲಪತಿ ಡಾ. ಎಚ್. ಎಸ್. ಬಲ್ಲಾಳ್, ಪರ ಉಪಕುಲಪತಿ ಡಾ. ವಿ. ಸುರೇಂದ್ರ ಶೆಟ್ಟಿ, ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್, ಸಂಜೀವನಿ ಟ್ರಸ್ಟಿಗಳಾದ ವಿಜಯಲಕ್ಷ್ಮೀ ರಾವ್, ಡಾ. ದೇವಿಪ್ರಸಾದ್, ಲಕ್ಷ್ಮೀಶ ಜಿ. ಆಚಾರ್ಯ, ಡಾ. ಶ್ರುತಿ ರಾವ್, ಡಾ. ಪ್ರಶಾಂತ್ ರಾವ್, ಅಕ್ವಾಎಟಿಎಮ್ ಸಿಇಒ ಸುಬ್ರಹ್ಮಣ್ಯ ಕುಸಣೂರು ಉಪಸ್ಥಿತರಿದ್ದರು.
ಸಂಜೀವನಿ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ರಾವ್ ಪ್ರಸ್ತಾವನೆಗೈದರು. ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Kinnigoli-20021703 Kinnigoli-20021704

Comments

comments

Comments are closed.

Read previous post:
Kinnigoli-20021702
ಕೆಂಚನಕೆರೆ ಯಕ್ಷಗಾನ – ಸನ್ಮಾನ

ಕಿನ್ನಿಗೋಳಿ:  ಕೆಂಚನಕೆರೆ ಚಂದು ಛಾಯ ಮುಂಭಾಗದಲ್ಲಿ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳದವರ ಬಯಲಾಟ ಸಂದರ್ಭ ಹಿರಿಯ ಹವ್ಯಾಸಿ ಭಾಗವತ ಕೆಂಚನಕೆರೆ ದಿ. ದೂಜ ಯಾನೆ...

Close