ಜೆಡಿಎಸ್ಸ್ ಸಾದನೆಗಳನ್ನು ಮತದಾರರರಿಗೆ ತಿಳಿಸಿ

ಮುಲ್ಕಿ: ರಾಜ್ಯದಲ್ಲಿ ಭೃಷ್ಟಾಚಾರರಹಿತ ಆಡಳಿತ ಕೊಡುತ್ತೇನೆ ಎಂದು ಹೇಳಿ ಅಧಿಕಾರ ಹಿಡಿದ ಕಾಂಗ್ರೆಸ್ಸ್ ಹಾಗೂ ರಾಜ್ಯದಲ್ಲಿ ಕೋಮುಗಲಭೆಗೆ ಕಾರಣವಾಗುತ್ತಿರುವ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಮಾಜೀ ಸಚಿವ ಹಾಗೂ ಜೆಡಿಎಸ್ಸು ಪಕ್ಷದ ಅಮರನಾಥ ಶೆಟ್ಟಿ ಹೇಳಿದರು. ಅವರು ಮೂಲ್ಕಿ ಬ್ಲಾಕಿನ ಜೆಡಿಎಸ್ಸು ಕಾರ‍್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.ಕಾಂಗ್ರೆಸ್ಸ್ ಸರಕಾರದ ಹಗರಣಗಳ ವಿರುದ್ದ ತನಿಖೆಯಾಗಲಿ ಎಂದು ಹೇಳಿದ ಅವರು ಜೆಡಿಎಸ್ಸು ಪಕ್ಷದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸರಕಾರದ ಸಾದನೆಗಳನ್ನು ಜನರಿಗೆ ತಿಳಿಸಿ ಎಂದರು. ಕೇರಳದ ಮುಖ್ಯ ಮಂತ್ರಿ ಮಂಗಳೂರು ಬೇಟಿ ವಿರುದ್ದ ಸಂಘಟನೆಗಳ ಪ್ರತಿಭಟನೆ ಸರಿಯಲ್ಲ ಎಂದರು.ಮುಂದಿನ ವಿಧಾನಸಭಾ ಚುನಾವಣೆಯ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಅಶ್ವಿನ್ ಪಿರೇರಾ ಮಾತನಾಡಿ ಮಾಜೀ ಸಚಿವ ಅಮರನಾಥ ಶೆಟ್ಟಿಯವರು ಸಚಿವರಾಗಿದ್ದ ವೇಳೆ ಮೂಲ್ಕಿ ಹೋಬಳಿಯಲ್ಲಿ ಮಾಡಿದ ಸಾಧನೆ ಹಾಗೂ ಕೆಲಸಗಳನ್ನು ಮತದಾರರರಿಗೆ ತಿಳಿಸಿ ವಿಧಾನಸಭೆ ಚುನಾವಣೆಗೆ ಸಿದ್ದರಾಗಿ ಎಂದು ಕಾರ‍್ಯಕರ್ತರಿಗೆ ತಿಳಿಸಿದರು.ವೇದಿಕೆಯಲ್ಲಿ ಹಿರಿಯ ಜೆಡಿಎಸ್ಸು ನಾಯಕರಾದ ಹರೀಶ್ ಪುತ್ರನ್,ಪ್ರಸಾದ ಶೆಟ್ಟಿ ಬಳಕುಂಜೆರೀಶ್ ಶೆಟ್ಟಿ ಶಿಮಂತೂರು,ಆದಿಲ್,ವಿಮಲಾ ಪುಜಾರಿ,ಉಷಾ ಪೂಜಾರ‍್ತಿ,ಸಿದ್ದಣ್ಣ ಗೌಡ್ರು,ಮುನ್ನ ಯಾನೆ ಮಹೇಶ್,ಕುಮಾರ್ ಮುಲ್ಕಿ.ಮನ್ಸೂರು ಲಿಂಗಪ್ಪಯಕಾಡು,ಜಯ ಕುಮಾರ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.

ನವೀನ್ ಪುತ್ರನ್ ಸ್ವಾಗತಿಸಿದರು,ಬಷೀರ್ ಕೆಎಸ್‌ರಾವ್ ನಗರ ಧನ್ಯವಾದ ಅರ್ಪಿಸಿದರು.

Mulki-260221703

Comments

comments

Comments are closed.

Read previous post:
Kinnigoli-25021702
ಕಿನ್ನಿಗೋಳಿ ಕಟೀಲು ಹಳೆಯಂಗಡಿ ಸಂಪೂರ್ಣ ಬಂದ್

ಕಿನ್ನಿಗೋಳಿ : ಕೇರಳ ಮುಖ್ಯಮಂತ್ರಿ ಪಿಣರಾಯಿ ಆಗಮನ ಹಿನ್ನೆಲೆಯಲ್ಲಿ ಸಂಘ ಪರಿವಾರ ಕರೆ ಕೊಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಹಿನ್ನೆಲೆಯಲ್ಲಿ ಕಿನ್ನಿಗೋಳಿ ಕಟೀಲು ಹಳೆಯಂಗಡಿ ಮುಲ್ಕಿ ಪರಿಸರದಲ್ಲಿ...

Close