ಕಿನ್ನಿಗೋಳಿ ಕಟೀಲು ಹಳೆಯಂಗಡಿ ಸಂಪೂರ್ಣ ಬಂದ್

ಕಿನ್ನಿಗೋಳಿ : ಕೇರಳ ಮುಖ್ಯಮಂತ್ರಿ ಪಿಣರಾಯಿ ಆಗಮನ ಹಿನ್ನೆಲೆಯಲ್ಲಿ ಸಂಘ ಪರಿವಾರ ಕರೆ ಕೊಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಹಿನ್ನೆಲೆಯಲ್ಲಿ ಕಿನ್ನಿಗೋಳಿ ಕಟೀಲು ಹಳೆಯಂಗಡಿ ಮುಲ್ಕಿ ಪರಿಸರದಲ್ಲಿ ಖಾಸಗಿ ಸರ್ವಿಸ್ ಬಸ್ಸುಗಳು ಬಸ್ಸು ಸಂಚಾರ ಸ್ಥಗಿತಗೊಳಿಸಿರುವುದರಿಂದ ಬಂದ್ ಬಹುತೇಕ ಸಂಪೂರ್ಣ ಯಶಸ್ವಿಯಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್‌ಗೆ ಬೆಂಬಲ ನೀಡಿ ವ್ಯವಹಾರಗಳನ್ನು ಮುಚ್ಚಿದ್ದು ಬ್ಯಾಂಕ್‌ಗಳಿಗೆ ರಜಾ ದಿನವಾಗಿತ್ತು ಸರಕಾರಿ ಕಛೇರಿಗಳು ತೆರೆದಿತ್ತು. ಬಸ್ಸು ಸಂಚಾರವಿಲ್ಲದ ಕಾರಣ ಜನರು ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ.
ಬೊಳ್ಳೂರು, ಪಕ್ಷಿಕೆರೆ ಹಾಗೂ ಎಸ್. ಕೋಡಿ ಬಳಿ ಬೆಳಿಗ್ಗೆ ರಸ್ತೆಯಲ್ಲಿ ಟಯರ್ ಬೆಂಕಿ ಹಚ್ಚಿದ ಘಟನೆಗಳು ನಡೆದಿದ್ದು ಮುಲ್ಕಿ ಪೋಲೀಸರು ಆಗಮಿಸಿ ತೆರವುಗೊಳಿಸಿದರು.
ಖಾಸಗಿ ವಾಹನ, ಕಾರು ರಿಕ್ಷಾಗಳು ಹಾಗೂ ಜನರ ಓಡಾಟ ವಿರಳವಾಗಿತ್ತು. ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಬಿಗಿ ಪೋಲೀಸ್ ಬಂದೊ ಬಸ್ತ್ ಏರ್ಪಡಿಸಲಾಗಿತ್ತು

ಕಟೀಲು

Kateel-25021701 Kateel-25021702

ಕಿನ್ನಿಗೋಳಿ
Kinnigoli-25021701 Kinnigoli-25021702

ಬೊಳ್ಳೂರು

Kinnigoli-25021703

ಹಳೆಯಂಗಡಿ

Kinnigoli-25021704

ಮುಲ್ಕಿ

Mulki-25021701

Comments

comments

Comments are closed.