ಕೊಡೆತ್ತೂರು ಅರಿವಿನ ಅಂಗಳ ಕಾರ್ಯಕ್ರಮ

ಕಿನ್ನಿಗೋಳಿ: ಗ್ರಾಮ ಮಟ್ಟದಲ್ಲಿ ಕಲೆ, ಸಂಸ್ಕೃತಿ, ಜಾನಪದಿಯ ಆಚರಣೆಗಳು, ಮಾಯವಾಗುತ್ತಿರುವ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮ ಶ್ಲಾಘನೀಯ ಎಂದು ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಹೇಳಿದರು. ಅವರು ದೇವಸ್ಯ ಮಠದ ವಠಾರದಲ್ಲಿ ನಡೆದ ಅರಿವಿನ ಅಂಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯ ದಾಮೋದರ ಶೆಟ್ಟಿ ಮಾತನಾಡಿ ಗ್ರಾಮೀಣ ಭಾಗದ ಜನರಲ್ಲಿ ಶಿಕ್ಷಣ, ಆರೋಗ್ಯ ಕಾಳಜಿಯ ಜತೆಗೆ ಉಳಿತಾಯದ ಮನೋಭಾವದ ಬಗ್ಗೆ ತಿಳಿ ಹೇಳುವ ಕಾರ್ಯಕ್ರಮ ನಿರಂತರ ನಡೆಯ ಬೇಕಾಗಿದೆ ಇದರಿಂದ ಸಮಾಜಿಕ ಅರಿವು ಮೂಡುತ್ತದೆ ಎಂದು ಹೇಳಿದರು. ಕೊಡೆತ್ತೂರು ಗುತ್ತು ಸಂಜೀವ ಶೆಟ್ಟಿ , ದಯಾನಂದ ಶೆಟ್ಟಿ ಕಿನ್ನಿಲಚ್ಚಿಲ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ಗ್ರಾಯತ್ರಿ ಎಸ್ ಉಡುಪ ಪ್ರಸ್ತಾವನೆಗೈದು ಸ್ವಾಗತಿಸಿದರು. ಸುಧಾ ಉಡುಪ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಳಿಂದ ಯೋಗ ಪ್ರದರ್ಶನ , ಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶನ ನಡೆಯಿತು.

Mulki-260221705

Comments

comments

Comments are closed.

Read previous post:
Mulki-260221704
ಕ್ರಿಯಾಶೀಲ ಸಾಧನೆಗೆ ಸಮಾಜದಿಂದ ಮನ್ನಣೆ

ಮುಲ್ಕಿ: ಭವಿಷ್ಯದ ಹಿತದೃಷ್ಠಿಯಿಂದ ಕ್ರಿಯಾಶೀಲ ಸಾಧನೆಗೆ ಸಮಾಜದಿಂದ ಮನ್ನಣೆದೊರೆಯುತ್ತದೆ ಎಂದು ವೇದಮೂರ್ತಿ ವಾಧಿರಾಜ ಉಪಾಧ್ಯಯ ಕೊಲೆಕಾಡಿ ಹೇಳಿದರು. ಅವರು ಮುಲ್ಕಿ ಸಮೀಪದ ಕೊಲೆಕಾಡಿ ಶಾಸ್ತಾವು ಮಹಾಲಿಂಗೇಶ್ವರ ದೇವಸ್ಥಾನ...

Close