ಕ್ರಿಯಾಶೀಲ ಸಾಧನೆಗೆ ಸಮಾಜದಿಂದ ಮನ್ನಣೆ

ಮುಲ್ಕಿ: ಭವಿಷ್ಯದ ಹಿತದೃಷ್ಠಿಯಿಂದ ಕ್ರಿಯಾಶೀಲ ಸಾಧನೆಗೆ ಸಮಾಜದಿಂದ ಮನ್ನಣೆದೊರೆಯುತ್ತದೆ ಎಂದು ವೇದಮೂರ್ತಿ ವಾಧಿರಾಜ ಉಪಾಧ್ಯಯ ಕೊಲೆಕಾಡಿ ಹೇಳಿದರು. ಅವರು ಮುಲ್ಕಿ ಸಮೀಪದ ಕೊಲೆಕಾಡಿ ಶಾಸ್ತಾವು ಮಹಾಲಿಂಗೇಶ್ವರ ದೇವಸ್ಥಾನ ಕುಂಜಾರುಗಿರಿಯಲ್ಲಿ ದೇವಳದ ಆಡಳಿತ ಮಂಡಳಿ ಹಾಗೂ ಭಜನಾಮಂಡಳಿ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ನಡೆದ ದಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ‍್ಯಕ್ರಮಗಳ ಅದ್ಯಕ್ಷತೆ ವಹಿಸಿ ಮಾತನಾಡಿದರು.ಅವರು ಮಾತನಾಡಿ ಮನುಷ್ಯನ ಸಾದನೆಗೆ ಮಿತಿಯಿಲ್ಲ ದೇವರ ಆಶಿರ್ವಾದ ಜೊತೆಗೆ ಶ್ರಮವಹಿಸಿ ಕೆಲಸ ಮಾಡಿದರೆ ಪ್ರಶಸ್ತಿ ಅರಸಿಕೊಂಡು ಬರುತ್ತದೆ ಎಂದರು.ದೇವಳದ ಜೀರ್ಣೋದ್ದಾರ ಸಮಿತಿಯ ಗೋಪೀನಾಥ ಪಡಂಗ ಮಾತನಾಡಿ ಎಳವೆಯಿಂದಲೇ ಶಿಸ್ತು ಜೀವನದಲ್ಲಿ ರೂಢಿಸಿಕೊಂಡರೆ ಬದುಕು ಸಾರ್ಥಕ ಇದಕ್ಕೆ ಪ್ರಶಸ್ತಿ ವಿಜೇತ ವೆಂಕಿ ಫಲಿಮಾರು ಸಾಕ್ಷಿ ಎಂದರು.ಸಮಾರಂಭದಲ್ಲಿ ಕೊಲೆಕಾಡಿ ಕೆಪಿಎಸ್‌ಕೆ ಪ್ರೌಢ ಶಾಲಾ ಶಿಕ್ಷಕ ಹಾಗೂ ಕಲೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆದಿರುವ ‘ವೆಂಕಿ ಫಲಿಮಾರ್’ರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.ಕಾರ‍್ಯಕ್ರಮಕ್ಕೆ ಸಹಕಾರ ನೀಡಿದ ನೆಲೆಯಲ್ಲಿ ಪುಷ್ಪರಾಜ ಕೊಲೆಕಾಡಿಯವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಜನಾ ಮಂಡಳಿಯ ಗಂಗಾಧರ ಶೆಟ್ಟಿ ಬರ್ಕೆತೋಟ,ಮನೋಹರ ಕೋಟ್ಯಾನ್,ರಂಗನಾಥ ಶೆಟ್ಟಿ,ರಾಜೇಶ್ ಭಟ್ ಕೊಲೆಕಾಡಿ,ಯತೀಶ್ ಕೊಲೆಕಾಡಿ,ಅಣ್ಣು ಮೈಲೊಟ್ಟು, ಕೊಲೆಕಾಡಿ,ರಮೇಶ್ ಬಂಗೇರ,ರಮಾನಂದ,ಸಂದೀಪ್,ಶಂಕರ್ ಪಡಂಗ ಮತ್ತಿತರರು ಇದ್ದರು. ದೇವಳದ ಅರ್ಚಕ ಶ್ರೀಕಾಂತ ಭಟ್ ಸ್ವಾಗತಿಸಿದರು ಚಿದಾನಂದ ಕೊಲೆಕಾಡಿ ನಿರೂಪಿಸಿದರು ಬಳಿಕ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದವು.

Mulki-260221704

Comments

comments

Comments are closed.

Read previous post:
Mulki-260221702
ಮಹಾಗಣಪತಿ ದೇವಸ್ಥಾನ ವಾರ್ಷಿಕ ಉತ್ಸವ

ಮೂಲ್ಕಿ: ಧಾರ್ಮಿಕ ಕೇಂದ್ರಗಳು ಸಾಂಸ್ಕೃತಿಕ ಹಾಗೂ ಕಲಾ ಮೌಲ್ಯಗಳಿಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ಕಲಾಮೌಲ್ಯಾಭಿವೃದ್ಧಿಗೆ ಸಹಕರಿಸುತ್ತಿರುವುದು ಅಭಿನಂದನೀಯ ಎಂದು ಹಿರಿಯ ಅರ್ಥದಾರಿ, ಯಕ್ಷಗಾನ ಬಯಲಾಟ ಅಕಾಡಮಿ...

Close