ಮಹಾಗಣಪತಿ ದೇವಸ್ಥಾನ ವಾರ್ಷಿಕ ಉತ್ಸವ

ಮೂಲ್ಕಿ: ಧಾರ್ಮಿಕ ಕೇಂದ್ರಗಳು ಸಾಂಸ್ಕೃತಿಕ ಹಾಗೂ ಕಲಾ ಮೌಲ್ಯಗಳಿಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ಕಲಾಮೌಲ್ಯಾಭಿವೃದ್ಧಿಗೆ ಸಹಕರಿಸುತ್ತಿರುವುದು ಅಭಿನಂದನೀಯ ಎಂದು ಹಿರಿಯ ಅರ್ಥದಾರಿ, ಯಕ್ಷಗಾನ ಬಯಲಾಟ ಅಕಾಡಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಹೇಳಿದರು.
ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಉತ್ಸವ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ಸಾಂಸ್ಕೃತಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕ್ಷೇತ್ರದ ಸಾಂಸ್ಕೃತಿಕ ಸಂಘವು ಕಳೆದ ೫೨ವರ್ಷಗಳ ಸುಧೀರ್ಘ ಅವಧಿಯಲ್ಲಿ ಯುವ ಜನತೆಗೆ ಉತ್ತಮ ಸಂಸ್ಕಾರದ ಜೊತೆಗೆ ಸಾಂಸ್ಕೃತಿಕವಾಗಿ ಕ್ಷೇತ್ರವನ್ನು ಬೆಳಗಿಸಿ ಕಲಾಕಾರರನ್ನು ಗುರುತಿಸಿ ಗೌರವಿಸುತ್ತಾ ಬರುತ್ತಿರುವ ಕಾರ್ಯ ಸ್ತುತ್ಯರ್ಹ ಎಂದರು.
ಈ ಸಂದರ್ಭ ಸಾಧಕರಾದ ಈಶ್ವರ ಭಟ್(ನಿವೃತ್ತ ಪ್ರಾಂಶುಪಾಲರು),ರವಿ ಅಲೆವೂರಾಯ(ಹವ್ಯಾಸಿ ಕಲಾವಿದ),ಕೃಷ್ಣ ಮೂರ್ತಿ ಪಾಂಗಣ್ಣಾಯ ಮತ್ತು ರಾಮಚಂದ್ರ ಪಾಂಗಣ್ಣಾಯ( ಚೆಂಡೆ ಮತ್ತು ಮದ್ದಳೆ ಕಲಾವಿದರು) ವಿಶೇಷವಾಗಿ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಶಿವರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರದ ತಂತ್ರಿಗಳಾದ ಶಿವರಾಜ ಉಪಾದ್ಯಾಯ, ಅರ್ಚಕ ಗಣೇಶ್ ಭಟ್,ಮತ್ತು ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಮದಾಸ್ ಪಾವಂಜೆ ನಿರೂಪಿಸಿದರು.

Mulki-260221702

Comments

comments

Comments are closed.

Read previous post:
Kinnigoli26021702
ಕುಬೆವೂರು – ಗಡು ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದ ಗಡುವಿನ ನೇಮೋತ್ಸವ ನಡೆಯಿತು.

Close