ಹರಿಹರ ಕ್ಷೇತ್ರ ಯುವಕ ವೃಂದ ಸಭಾ ಕಾರ್ಯಕ್ರಮ

ಮೂಲ್ಕಿ: ಮೂಲ್ಕಿಯ ಕಾರ್ನಾಡಿನ ಶ್ರೀ ಹರಿಹರ ಕ್ಷೇತ್ರದ ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಮಹಿಳಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಹರಿಹರ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮೂಲ್ಕಿ ನಗರ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ರಾಧಿಕಾ ಯಾದವ ಕೋಟ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ ಎಂ ಮತ್ತು ಬೆಂಗಳೂರಿನ ಎಂ ಎಸ್ ರಾಮಯ್ಯ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ  ಡಾ. ಪ್ರಕೃತಿ ಶ್ರೀನಾಥ್ ಕಾರ್ನಾಡುರನ್ನು ಸನ್ಮಾನಿಸಿದರು.

ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ ಎಚ್ ಅರವಿಂದ ಪೂಂಜ ,ಮೂಲ್ಕಿ ನ್ಯಾಯವಾದಿ ಶಿವಾನಂದ ಕಾಮತ್, ಉದ್ಯಮಿ ಬಿಪಿನ್ ಜಗನ್ನಾಥ ಕೋಟ್ಯಾನ್, ಉದ್ಯಮಿ ಕಮಲಾಕ್ಷ ಬಡಗುಹಿತ್ಲು ಬಪ್ಪನಾಡು ಮತ್ತಿತರಿದ್ದರು.

Mulki-28021704

Comments

comments

Comments are closed.

Read previous post:
Mulki-28021703
ಕೊಳಚಿಕಂಬಳ ಯೂತ್ ಕ್ಲಬ್ ವಾರ್ಷಿಕೋತ್ಸವ

ಮೂಲ್ಕಿ: ನದಿ ಮತ್ತು ಸಮುದ್ರ ತೀರದಲ್ಲಿರುವ ಕೊಳಚಿಕಂಬಳ ಪ್ರದೇಶಕ್ಕೆ ಸಸಿಹಿತ್ಲು-ಚಿತ್ರಾಪು-ಕೊಳಚಿಕಂಬಳ ಮೂಲಕ ನದಿಗೆ ಸೇತುವೆ ನಿರ್ಮಿಸಿ ಮೂಲ್ಕಿಗೆ ನೇರ ಸಂಪರ್ಕ ಕಲ್ಪಿಸುವ ಸ್ಥಳೀಯರ ಬಹು ದಿನದ ಬೇಡಿಕೆಯನ್ನು...

Close