ಕುಂಜಾರಗಿರಿ ಧಾರ್ಮಿಕ ಸಭೆ

ಮೂಲ್ಕಿ: ಮೂಲ್ಕಿ ಸಮೀಪದ ಕೊಲೆಕಾಡಿ ಶಾಸ್ತಾವು ಮಹಾಲಿಂಗೇಶ್ವರ ದೇವಸ್ಥಾನ ಕುಂಜಾರುಗಿರಿಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಲೆಕಾಡಿ ಕೆಪಿಎಸ್‌ಕೆ ಪ್ರೌಢ ಶಾಲಾ ಶಿಕ್ಷಕ ಹಾಗೂ ಕಲೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆದಿರುವ ‘ವೆಂಕಿ ಫಲಿಮಾರ್’ರವರನ್ನು ವೇದಮೂರ್ತಿ ವಾದಿರಾಜ ಉಪಾಧ್ಯಾಯರವರು ಸನ್ಮಾನಿಸಿದರು ಹಾಗೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ನೆಲೆಯಲ್ಲಿ ಪುಷ್ಪರಾಜ ಕೊಲೆಕಾಡಿಯವರನ್ನು ಗೌರವಿಸಿದರು. ದೇವಳದ ಜೀರ್ಣೋದ್ದಾರ ಸಮಿತಿಯ ಗೋಪೀನಾಥ ಪಡಂಗ,ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಜನಾ ಮಂಡಳಿಯ ಗಂಗಾಧರ ಶೆಟ್ಟಿ ಬರ್ಕೆತೋಟ,ಮನೋಹರ ಕೋಟ್ಯಾನ್,ರಂಗನಾಥ ಶೆಟ್ಟಿ,ರಾಜೇಶ್ ಭಟ್ ಕೊಲೆಕಾಡಿ,ಯತೀಶ್ ಕೊಲೆಕಾಡಿ, ದೇವಳದ ಅರ್ಚಕ ಶ್ರೀಕಾಂತ ಭಟ್ ಮತ್ತಿತರಿದ್ದರು.

Mulki-28021705

Comments

comments

Comments are closed.

Read previous post:
Mulki-28021704
ಹರಿಹರ ಕ್ಷೇತ್ರ ಯುವಕ ವೃಂದ ಸಭಾ ಕಾರ್ಯಕ್ರಮ

ಮೂಲ್ಕಿ: ಮೂಲ್ಕಿಯ ಕಾರ್ನಾಡಿನ ಶ್ರೀ ಹರಿಹರ ಕ್ಷೇತ್ರದ ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಮಹಿಳಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಹರಿಹರ ಕ್ಷೇತ್ರದಲ್ಲಿ ಮಹಾ...

Close