ಸ್ವಾರ್ಥ ರಹಿತ ವಸ್ತು ಎಂದರೆ ತಾಯ್ತನ ಮಾತ್ರ

ಮೂಲ್ಕಿ: ಪ್ರಪಂಚದಲ್ಲಿ ದೇವರ ಪ್ರತಿರೂಪ ಎಂದರೆ ಅದು ತಾಯಿ ಮಾತ್ರ ಎಂದು ರೆ.ಪಾ.ಡೆರಿಕ್ ಡಿಸೋಜಾ ಕಪುಚಿನ್ ಹೇಳಿದರು.
ಮೂಲ್ಕಿಯ ಇತಿಹಾಸ ಪ್ರಸಿದ್ದ ಘಜನಿ ಚರ್ಚಿನ ವಾರ್ಷಿಕ ಪೂಜೆಯ ಸಂದರ್ಭ ಪ್ರವಚನ ನೀಡಿದರು. ಪ್ರಪಂಚದಲ್ಲಿ ಸ್ವಾರ್ಥ ರಹಿತವಾಗಿರುವ ವಸ್ತು ಎಂದರೆ ತಾಯ್ತನ ಮಾತ್ರ ಆದುದರಿಂದ ತಾಯಂದಿರನ್ನು ಮಾತೆ ಮೇರಿಯ ರೂಪದಲ್ಲಿ ಗೌರವಿಸಬೇಕು ಎಂದರು. ಈ ಸಂದರ್ಭ ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ಧರ್ಮಗುರುಗಳಾದ ಫಾ, ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ನೇತ್ರತ್ವದಲ್ಲಿ ವೀಶೇಷ ಪೂಜೆ ನಡೆಯಿತು. ಈ ಸಂದರ್ಭ ಫಾ,ಮರ‍್ವಿನ್ ನೊರಾಹ್ನಾ ಕಿರೆಮ್, ಫಾ, ಮಗಯಾಕ್ಸಿಮ್ ಪಿಂಟೋ ಕಿರೆಮ್,ಫಾ, ಐವನ್ ಗೋಮ್ಸ್ ಎಸ್‌ವಿಡಿ ಮೂಲ್ಕಿ, ಫಾ,ಅನಿಲ್ ಫೇರ್ನಾಂಡಿಸ್ ಎಸ್‌ವಿಡಿ ಮೂಲ್ಕಿ, ಫಾ, ಮೈಕಲ್ ಮಿನೇಜಸ್ ಕಾರ್ಕಳ, ಫಾ ಜೇಸನ್ ಪಾಸ್ ಕಪುಚಿನ್ ಮೂಲ್ಕಿ ಪೂಜೆಯಲ್ಲಿ ಸಹಭಾಗಿಗಳಾದರು.
ಮೂಲ್ಕಿ ಧರ್ಮಸಭೆಯ ಉಪಾಧ್ಯಕ್ಷೆ ಮೋಲಿ ಡಿಸೋಜ ಮತ್ತು ಕಾರ್ಯದರ್ಶಿ ಪ್ರಕಾಶ್ ಮೊಂತೇರೋ ಮತ್ತು ಮೂಲ್ಕಿ ಧರ್ಮ ಸಭಾ ಸದಸ್ಯರು ಉಪಸ್ಥಿತರಿದ್ದರು.

Mulki-280221707

Comments

comments

Comments are closed.

Read previous post:
Mulki-28021705
ಕುಂಜಾರಗಿರಿ ಧಾರ್ಮಿಕ ಸಭೆ

ಮೂಲ್ಕಿ: ಮೂಲ್ಕಿ ಸಮೀಪದ ಕೊಲೆಕಾಡಿ ಶಾಸ್ತಾವು ಮಹಾಲಿಂಗೇಶ್ವರ ದೇವಸ್ಥಾನ ಕುಂಜಾರುಗಿರಿಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಲೆಕಾಡಿ ಕೆಪಿಎಸ್‌ಕೆ ಪ್ರೌಢ ಶಾಲಾ ಶಿಕ್ಷಕ ಹಾಗೂ ಕಲೆಯಲ್ಲಿ...

Close