ಕೊಳಚಿಕಂಬಳ ಯೂತ್ ಕ್ಲಬ್ ವಾರ್ಷಿಕೋತ್ಸವ

ಮೂಲ್ಕಿ: ನದಿ ಮತ್ತು ಸಮುದ್ರ ತೀರದಲ್ಲಿರುವ ಕೊಳಚಿಕಂಬಳ ಪ್ರದೇಶಕ್ಕೆ ಸಸಿಹಿತ್ಲು-ಚಿತ್ರಾಪು-ಕೊಳಚಿಕಂಬಳ ಮೂಲಕ ನದಿಗೆ ಸೇತುವೆ ನಿರ್ಮಿಸಿ ಮೂಲ್ಕಿಗೆ ನೇರ ಸಂಪರ್ಕ ಕಲ್ಪಿಸುವ ಸ್ಥಳೀಯರ ಬಹು ದಿನದ ಬೇಡಿಕೆಯನ್ನು ಶೀಘ್ರದಲ್ಲಿ ಈಡೇರಿಸಲಾಗುವುದೆಂದು ಶಾಸಕ ಕೆ ಅಭಯಚಂದ್ರ ಜ್ಯೆನ್ ಹೇಳಿದರು.

ಮೂಲ್ಕಿಯ ಕೊಳಚಿಕಂಬಳ ಶ್ರೀ ಜಾರಂದಾಯ ದೇವಳದ ವಠಾರದಲ್ಲಿ ನಡೆದ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ 8ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯುವ ಸಮುದಾಯ ಸಮಾಜದ ಅಭಿವೃದ್ದಿಯ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ಮಾಡಿದಲ್ಲಿ ಗ್ರಾಮಗಳ ಅಭಿವೃದ್ದಿ ಸಾಧ್ಯವಿದ್ದು ಯೋಗ, ಧ್ಯಾನಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾದ್ಯವೆಂದು ತಿಳಿಸಿದರು. ಕಾರ್ಯಕ್ರಮವನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ಉದ್ಘಾಟಿಸಿದರು.

ಜೀರ್ಣೋದ್ದಾರಗೊಳ್ಳಳಿರುವ ಕೊಳಚಿಕಂಬಳ ಶ್ರೀ ಜಾರಂದಾಯ ದೇವಳದ ಜೀರ್ಣೋದ್ದಾರದ ಕುರಿತ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದ ಅದಾನಿ-ಯುಪಿಸಿ ಎಲ್ ಜಂಟಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವರವರು ಅದಾನಿ ಸಂಸ್ಥೆಯು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು ರಿಸರದ ಧಾರ್ಮಿಕ, ಶ್ಯೆಕ್ಷಣಿಕ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದ್ದು ಜನರ ಬೆಂಬಲ ಹಾಗೂ ದೇವರ ಅನುಗ್ರಹದಿಂದ ಅದಾನಿ ಸಂಸ್ಥೆಯು ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ. ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವನ್ನು ಹಾಗೂ ದ.ಕ.ಮತ್ತು ಉಡುಪಿ ಜಿಲ್ಲೆಗೆ ಹೆಚ್ಚಿನ ವಿದ್ಯುತ್ತನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕಂಬಳ ಮತ್ತು ಯಕ್ಷಗಾನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಂಬಳದಲ್ಲಿನ ಕೋಣಗಳ ಜೊತೆಗೆ ಓಟಗಾರರು ಕೇವರ 140 ಮೀಟರ್ ಗದ್ದೆಯಲ್ಲಿ ಉತ್ತಮ ನಿರ್ವಹಣೆ ತೋರುತ್ತಿದ್ದು ಅವರಿಗೆ ಅತ್ಲೇಟಿಕ್ಸ್ ನಲ್ಲಿ ಉತ್ತಮ ಭವಿಷ್ಯವಿದ್ದು ಅವರನ್ನು ಉತ್ತಮ ಓಟಗಾರರನ್ನಾಗಿ ರೂಪಿಸುವ ಕಾರ್ಯ ಮಾಡಲಿದ್ದೇವೆ ಎಂದು ಹೇಳಿದರು. ಸಮಾರಂಭದಲ್ಲಿ ಯೋಗ ಗುರು ರಾಘವೇಂದ್ರ ರಾವ್, ಹಿರಿಯ ಸಮಾಜ ಸೇವಕ ನರೇಶ್ ಬಂಗೇರ ಕೊಳಚಿಕಂಬಳ ಮತ್ತು ಅಂತರಾಷ್ಟ್ರೀಯ ಮಟ್ಟದ ಸರ್ಫೀಂಗ್ ಪಟು ಕುಮಾರಿ ತನ್ವಿ ಜಗದೀಶ್ ಕೊಳಚಿಕಂಬಳ ಇವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ರಕ್ಷಾ ಪಿ ಸಾಲ್ಯಾನ್, ದೀಪಿಕಾ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸುರಕ್ಷಾ ಶೆಟ್ಟಿ ಮತ್ತು ಶಿಫಾಲಿಯವರಿಗೆ ಸಾನದ ಮನೆ ದಿ ಹರಿಯಪ್ಪ ಕೋಟ್ಯಾನ್ ಸ್ಮರಣಾಥ ವಿದ್ಯಾರ್ಥಿ ವೇತನವನ್ನು ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಾರ್ಷಿಕೋತ್ಸವದ ಪ್ರಯುಕ್ತ ಜರಗಿದ ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮೂಲ್ಕಿಯ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಹಳೆಯಂಗಡಿಯ ಪೂಜಾ ಕೆಟರರ‍್ಸ್ ಮಾಲಕ ಜಯ ಕೃಷ್ಣ ಕೋಟ್ಯಾನ್, ಉದ್ಯಮಿ ಹೇಮರಾಜ್ ಅಮೀನ್ ಕೊಳಚಿಕಂಬಳ, ಕೊಳಚಿಕಂಬಳ ಶ್ರೀ ಜಾರಂದಾಯ ದೇವಳದ ಗುರಿಕಾರರಾದದ ಹರಿಶ್ಚಂದ್ರ ಪಿ ಸಾಲ್ಯಾನ್, ಸಾನದ ಮನೆ ಕೃಷ್ಣ ಆರ್ ಕೋಟ್ಯಾನ್, ಶ್ರೀ ಜಾರಂದಾಯ ಸೇವಾ ಸಮಿತಿಯ ಅಧ್ಯಕ್ಷ ಎಂ ಪ್ರಕಾಶ್ ಸುವರ್ಣ, ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ಅಧ್ಯಕ್ಷ ಕೃಷ್ಣ ಸುವರ್ಣ, ಶ್ರೀ ಜಾರಂದಾಯ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ವಸಂತಿ ಬಂಗೇರ ಉಪಸ್ಥಿತರಿದ್ದರು.

ಹರಿಶ್ಚಂದ್ರ ಪಿ ಸಾಲ್ಯಾನ್ ಸ್ವಾಗತಿಸಿ, ಪ್ರಸ್ತಾವನೆಗ್ಯೆದರು, ಕುಮಾರಿ ಚರಿಷ್ಮಾ ವಂದಿಸಿದರು, ದಿನೇಶ್ ಕೊಲ್ನಾಡ್ ನಿರೂಪಿಸಿದರು.

Mulki-28021701 Mulki-28021702 Mulki-28021703

Comments

comments

Comments are closed.

Read previous post:
Mulki-260221705
ಕೊಡೆತ್ತೂರು ಅರಿವಿನ ಅಂಗಳ ಕಾರ್ಯಕ್ರಮ

ಕಿನ್ನಿಗೋಳಿ: ಗ್ರಾಮ ಮಟ್ಟದಲ್ಲಿ ಕಲೆ, ಸಂಸ್ಕೃತಿ, ಜಾನಪದಿಯ ಆಚರಣೆಗಳು, ಮಾಯವಾಗುತ್ತಿರುವ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮ ಶ್ಲಾಘನೀಯ ಎಂದು ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ...

Close