ಸಮಾಜದ ಸ್ವಂತಿಕೆಗೆ ಪ್ರಜ್ಞಾವಂತಿಕೆಯ ಬದುಕು

ಹಳೆಯಂಗಡಿ: ಸಮಾಜದ ಸ್ವಂತಿಕೆಗೆ ಪ್ರಜ್ಞಾವಂತನಾಗಿ ಬದುಕಬೇಕು, ಸಂಸ್ಕಾರದಿಂದ ಸಮಾಜವನ್ನು, ಹಿರಿಯರನ್ನು , ದೇಶದ ನೆಲ ಜಲ ಹಾಗೂ ಸಂಸ್ಕೃತಿಯನ್ನು ಗೌರವಿಸಲು ಸಾಧ್ಯ. ಮಾನವೀಯ ಮೌಲ್ಯದ ಕೊರತೆ ಮುಂದೊಂದು ದಿನ ನಮ್ಮ ದೇಶಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ| ಶಿವಕುಮಾರ್ ಮಗದ ಹೇಳಿದರು.
ಅವರು ಸಸಿಹಿತ್ಲಿನ ಉತ್ಥಾನ ಬಳಗ ಸೇವಾ ಟ್ರಸ್ಟ್‌ನ ಸಂಯೋಜನೆಯಲ್ಲಿ ನಡೆದ ವಿದ್ಯಾಭಾರತಿ ಶಿಶುಮಂದಿರದ 20ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಭಂಡಾರಿ ಮಹಾಮಂಡಲದ ಕೋಶಾಧಿಕಾರಿ ದಿನೇಶ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಜೀವನದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ನಿರಂತರ ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯ, ಬಾಲ್ಯದಲ್ಲಿಯೇ ಇಂತಹ ವಾತಾವರಣವನ್ನು ನಿರ್ಮಿಸಬೇಕು ಎಂದರು.
ಡಾ. ಶ್ರೀಕಾಂತ್ ದಂಪತಿಗಳು ನೀಡಿದ ರೂ. ಹತ್ತು ಸಾವಿರವನ್ನು ವರದರಾಜ ಅಮೀನ್‌ರ ಪುತ್ರನ ಚಿಕಿತ್ಸೆಗಾಗಿ ಹಸ್ತಾಂತರಿಸಲಾಯಿತು.
ಶಿಶು ಮಂದಿರದ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧೆಯ ಬಹುಮಾನವನ್ನು ಸುರೇಖಾ ದಿನೇಶ್ ಭಂಡಾರಿ ವಿತರಿಸಿ ಶುಭ ಹಾರೈಸಿದರು.
ಸಂಸ್ಥೆಯ ವಿಶ್ವಸ್ಥರಾದ ಹೇಮಚಂದ್ರ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಶಿಶುಮಂದಿರದ ನಾಯಕ ಸಂವಿದ್ ಭಾರ್ಗವ್ ಸ್ವಾಗತಿಸಿದರು, ರಂಜಿತಾ ಪರಿಚಯಿಸಿದರು. ಸಂಸ್ಥೆಯ ಮಾರ್ಗದರ್ಶಕ ಭಾಸ್ಕರ ಸಾಲ್ಯಾನ್‌ರವರು ಪ್ರಾಸ್ತಾವನೆಗೈದರು. ಪ್ರೇಮ ಹರಿಪ್ರಸಾದ್ ಬಹುಮಾನಿತ ಪಟ್ಟಿ ವಾಚಿಸಿದರು, ಸಂಧ್ಯಾ ಭಟ್ ವಂದಿಸಿದರು,
ಚೈತ್ರಾ ಶ್ರೀಕಾಂತ್ ಹಾಗೂ ಲಾವಣ್ಯ ಹೇಮಚಂದ್ರ ನಿರೂಪಿಸಿದರು. ಶಿಶುಮಂದಿರದ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Mulki-01031708

Comments

comments

Comments are closed.

Read previous post:
Mulki-01031707
ಮೂಲ್ಕಿ- ಸಹಾಯಕಿಗೆ ಬೀಳ್ಕೋಡುಗೆ

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ನಲ್ಲಿ 25 ವರ್ಷಗಳ ಪ್ರಥಮ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸಿ ಬಂಟ್ವಾಳ,ಸುರತ್ಕಲ್ ಸೇರಿದಂತೆ ಒಟ್ಟು 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶಶಿಕಲಾ...

Close