ಯಶೋಗಾಥೆ ಕೃತಿ ಬಿಡುಗಡೆ

ಕಿನ್ನಿಗೋಳಿ : ಜನಪರ ಚಿಂತನೆ ಹಾಗೂ ಸರಳ ಜೀವನವನ್ನು ಮೈಗೂಡಿಸಿ ಕೊಂಡ ಕೊಡೆತ್ತೂರು ಉಡುಪ ಕುಟುಂಬ ಕಲೆ ಸಂಸ್ಕೃತಿ, ಶಿಕ್ಷಣ ಧಾರ್ಮಿಕ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿದ್ದು ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಮಣಿಪಾಲ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಚ್ . ವಿನೋದ್ ಭಟ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬುಧವಾರ ಕಿನ್ನಿಗೋಳಿ ಯುಗಪುರುಷ ಸಹಯೋಗದೊಂದಿಗೆ ಮಣಿಪಾಲ ವಿಶ್ವವಿದ್ಯಾಲಯ ಪ್ರಕಾಶನ ಪ್ರಸ್ತುತ ಪಡಿಸಿದ ಡಾ. ಎನ್ ಗೋಪಾಲ ಕುಟ್ಟಿ ಅವರಿಂದ ರಚಿತ ಕೊಡೆತ್ತೂರು ಉಡುಪ ಕುಟುಂಬದ ಯಶೋಗಾಥೆ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮಣಿಪಾಲ ವಿವಿ. ಪ್ರಕಾಶನ ಕಳೆದ 5 ವರ್ಷದಿಂದ 90 ಕ್ಕೂ ಮಿಕ್ಕಿ ಗ್ರಂಥವನ್ನು ಹೊರತಂದಿದೆ ಮುಂದಿನ ಒಂದು ತಿಂಗಳಿನಲ್ಲಿ ನೂರರ ಗಡಿ ದಾಟಲಿದೆ ಎಂದು ಹೇಳಿದರು.
ಈ ಸಂದರ್ಭ ಕೃತಿಕಾರ ಡಾ. ಗೋಪಾಲ ಕುಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ , ಹಿರಿಯ ಸಾಹಿತಿ ಕೆ. ಜಿ. ಮಲ್ಯ, ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಸ್ವಾಗತಿಸಿದರು. ಡಾ. ನಯನಾಭಿರಾಮ ಉಡುಪ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli01031703

Comments

comments

Comments are closed.

Read previous post:
Mulki-01031708
ಸಮಾಜದ ಸ್ವಂತಿಕೆಗೆ ಪ್ರಜ್ಞಾವಂತಿಕೆಯ ಬದುಕು

ಹಳೆಯಂಗಡಿ: ಸಮಾಜದ ಸ್ವಂತಿಕೆಗೆ ಪ್ರಜ್ಞಾವಂತನಾಗಿ ಬದುಕಬೇಕು, ಸಂಸ್ಕಾರದಿಂದ ಸಮಾಜವನ್ನು, ಹಿರಿಯರನ್ನು , ದೇಶದ ನೆಲ ಜಲ ಹಾಗೂ ಸಂಸ್ಕೃತಿಯನ್ನು ಗೌರವಿಸಲು ಸಾಧ್ಯ. ಮಾನವೀಯ ಮೌಲ್ಯದ ಕೊರತೆ ಮುಂದೊಂದು...

Close