ರಸ್ತೆ ಬದಿ ಕಸ ತ್ಯಾಜ್ಯ ರಾಶಿ

ಕಿನ್ನಿಗೋಳಿ: ಮೂಲ್ಕಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೇ ಸೇತುವೆ ಬಳಿ ರಸ್ತೆಬದಿ ಗ್ರಹತ್ಯಾಜ್ಯ ಕಸಗಳ ರಾಶಿಯಾದ ಪರಿಣಾಮ ವಾಹನ ಚಾಲಕರು ಹಾಗೂ ಪಾದಾಚಾರಿ ವ್ಯಕ್ತಿಗಳಿಗೆ ಪ್ರಾಣ ಭೀತಿ ಎದುರಾಗಿದೆ.
ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಬೆವೂರು ರೈಲ್ವೇ ಸೇತುವೆಯ ಸನಿಹದಲ್ಲಿ ರಸ್ತೆ ಬದಿ ಪ್ಲಾಷ್ಟಿಕ್ ಚೀಲಗಳಲ್ಲಿ ಗ್ರಹತ್ಯಾಜ್ಯ ವಸ್ತುಗಳನ್ನು ತುಂಬಿಸಿ ಬಿಸಾಡಿರುವುದು ಇದೀಗ ರಾಶಿಯಾಗಿದೆ. ಹಳಸಿದ ಆಹಾರ ಪದಾರ್ಥಗಳ ಆಸೆಗೆ ಬರುವ ಬೀಡಾಡಿ ಪ್ರಾಣಿಗಳು ಏಕಾಏಕಿ ರಸ್ತೆ ದಾಟುವ ಕಾರಣ ವಾಹನ ಚಾಲಕರಿಗೆ ಸಮಸ್ಯೆಯಾಗಿದ್ದು ದ್ವಿಚಕ್ರವಾಹನ ಚಾಲಕರು ಬಿದ್ದು ಗಾಯಗೊಂಡಿರುವ ಹಲವಾರು ಪ್ರಕರಣಗಳಿವೆ.
ಆಹಾರದ ಆಸೆಯಿಂದ ಬರುವ ದನಗಳು ಪ್ಲಾಷ್ಟಿಕ್ ಚೀಲ ಸಮೇತ ಆಹಾರ ತಿನ್ನುವ ಕಾರಣ ಅವುಗಳ ಹೊಟ್ಟೆಯಲ್ಲಿ ಪ್ಲಾಷ್ಟಿಕ್ ಪಚನವಾಗದೆ ರೋಗಗ್ರಸ್ಥವಾಗುತ್ತದೆ. ಬೀಡಾಡಿ ನಾಯಿಗಳು ಆಹಾರಕ್ಕಾಗಿ ಜಗಳವಾಡುವ ಸಂದರ್ಭ ರಸ್ತೆಯಲ್ಲಿ ಓಡಾಡಿ ವಾಹನ ಚಾಲಕರಿಗೆ ಸಮಸ್ಯೆ ಉಂಟುಮಾಡಿದರೆ ರೋಷಗೊಂಡಿರುವ ಸಂದರ್ಭ ರಸ್ತೆಯಲ್ಲಿ ಪ್ರಯಾಣಿಸುವ ಮಕ್ಕಳು ಮತ್ತು ವಾದಾಚಾರಿ ವ್ಯಕ್ತಿಗಳಮೇಲೆ ಎಗರಿ ಕಚ್ಚಿಗಾಯಗೊಳಿಸಿವೆ.
ರಸ್ತೆ ಬದಿ ಹುಲ್ಲು: ರಸ್ತೆಯ ಇಕ್ಕೆಲಗಳಲ್ಲಿ ಹುಲ್ಲು ಬೆಳೆದಿರುವ ಕಾರಣ ಹತ್ತಿರ ಬರುವ ವರೆಗೂ ಈ ತ್ಯಾಜ್ಯಗಳಾಗಲೀ ಅಥವಾ ಪ್ರಾಣಿಗಳಾಗಲೀ ಕಾಣಿಸುವುದಿಲ್ಲ ಹತ್ತಿರ ಬಂದಂತೆ ತಟ್ಟನೆ ಎದುರಾಗುವ ಪ್ರಾಣಿಗಳಿಂದ ಸಮಸ್ಯೆಯುಂಟಾಗುತ್ತದೆ.
ದ್ವಿಚಕ್ರ ವಾಹನಗಳಲ್ಲಿ ಅಥವಾ ಕಾರಿನಲ್ಲಿ ಬರುವ ಜನರು ಈ ಪ್ಲಾಷ್ಟಿಕ್ ಚೀಲಗಳಲ್ಲಿ ತ್ಯಾಜ್ಯ ವಸ್ತುಗಳನ್ನು ತಂದು ಚಾಲನೆಯಲ್ಲಿಯೇ ಬಿಸಾಡಿ ಹೋಗುತ್ತಾರೆ ಎನ್ನುವುದು ಸ್ಥಳೀಯರ ದೂರು.
ದುರ್ವಾಸನೆ: ಅಹಾರದ ಆಸೆಯಿಂದ ತ್ಯಾಜ್ಯ ಚೀಲಗಳನ್ನು ರಸ್ತೆ ಮಧ್ಯದ ವರೆಗೂ ಪ್ರಾಣಿಗಳು ಎಳೆದಾಡುವುದರಿಂದ ರಸ್ತೆ ಪೂರ್ತಿ ಆಹಾರ ಪದಾರ್ಥ ಚೆಲ್ಲಿ ದುರ್ವಾಸನೆಗೆ ಕಾರಣವಾಗುತ್ತದೆ. ಇನ್ನು ಕಾಗೆ ಗಿಡುಗ ಮುಂತಾದ ಹಕ್ಕಿಗಳು ಈ ತ್ಯಾಜ್ಯಗಳನ್ನು ಎತ್ತಿಕೊಂಡುಹೋಗಿ ಪರಿಸರದ ತೋಟಗಳಲ್ಲಿ ಹಾಕುವುದರಿಂದ ಪರಿಸರದ ಜನರಿಗೂ ಸಮಸ್ಯೆಯಾಗುತ್ತಿದೆ.
ಕಸ ಹಾಕಲು ಮುಚ್ಚಳ ವಿರುವ ಟ್ಯಾಂಕ್ ಅಗತ್ಯ: ಸಾರ್ವಜನಿಕರಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಇಲ್ಲವಾಗಿದ್ದರೆ ಸೂಕ್ತ ಟ್ಯಾಂಕ್ ವ್ಯವಸ್ಥೆ ಮಾಡಬೇಕು ಸ್ಥಳೀಯರಿಗೆ ಗ್ರಹ ತ್ಯಾಜ್ಯಗಳನ್ನು ಮನೆಯಲ್ಲಿ ಕಾಂಪೋಷ್ಟು ಗೊಬ್ಬರ ಮಾಡುವ ವಿಧಾನದ ಬಗ್ಗೆ ಪಂಚಾಯಿತಿ ಮಾಹಿತಿ ಹಾಗೂ ಸೂಕ್ತ ವ್ಯವಸ್ಥೆ ಮಾಡಬೇಕು ಎನ್ನುವುದು ಸ್ಥಳೀಯರ ಅಭಿಮತವಾಗಿದೆ.

Mulki-010317010

Comments

comments

Comments are closed.

Read previous post:
Mulki-01031709
ಬಪ್ಪನಾಡಿನಲ್ಲಿ ಶತಚಂಡಿಕಾಧ್ವರ ಯಾಗ

ಮೂಲ್ಕಿ: ತುಳುನಾಡಿನ ಐತಿಹಾಸಿಕ ಕ್ಷೇತ್ರವಾಗಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕರ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಒಂಭತ್ತು ಮಾಗಣೆಯ ಭಕ್ತರ ಕೂಡುವಿಕೆಯಲ್ಲಿ ಮೇ. 3ರಿಂದ 5ರವರೆಗೆ ಶತ...

Close