ಅನಿತಾ ಪೂಜಾರಿ ಅಭಿನಂದನೆ

ಕುಳಾಯಿ: ಈಗೀಗ ಬರೆಯುವವರ ಸಂಖ್ಯೆ ಕಡಿಮೆಯಾಗಿದೆ ಹಾಗೆಯೇ ಓದುವವರೂ ಇಲ್ಲ. ಮೊಬೈಲ್ ನಲ್ಲಿಯೇ ತಾಸುಗಟ್ಟಲೆ ಸಮಯವನ್ನು ವ್ಯರ್ಥ ಮಾಡುವ ಇಂದಿನ ಕಾಲದಲ್ಲಿ, ಮುಂಬಾಯಿಯಲ್ಲಿದ್ದುಕೊಂಡು ಅನಿತಾ ಪೂಜಾರಿ ತಾಕೊಡೆಯವರು ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಬರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ರೀತಿಯ ಸಾಹಿತ್ಯ ಕೃಷಿಗಳು ಎಲ್ಲೆಡೆ ನಡೆಯಬೇಕಾಗಿದೆ. ಬರೀ ಕಟ್ಟಡ ಕಟ್ಟಿದರೆ ಸಾಲದು ಸಾಮಾಜಿಕರು ಸಂಘಟಿತರಾಗಬೇಕು ಸಮಾಜಪರ ಕಾರ್ಯಗಳ ಜೊತೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಗಳು ಇನ್ನಷ್ಟು ನಡೆಯಬೇಕು. ಇಂದು, ಈ ವೇದಿಕೆಯಲ್ಲಿ ಎರಡು ಕೃತಿಗಳು ಲೋಕಾರ್ಪಣೆಗೊಂಡಿರುವುದು ನಿಜವಾಗಿಯೂ ಖುಷಿ ನೀಡಿದೆ. ಅನಿತಾರವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸುವಂತಾಗಲಿ ಎಂದು ಪ್ರಖರ ವಾಗ್ಮಿ ಗಣೇಶ್ ಅಮೀನ್ ಸಂಕಮಾರ್ ನುಡಿದರು.
ಮಂಗಳೂರು ಸಮೀಪದ ಕುಳಾಯಿಯಲ್ಲಿರುವ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಇವರ ೩೪ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜರಗಿದ ಸಭಾಕಾರ್ಯಕ್ರಮದಲ್ಲಿ ಮುಂಬಯಿ ಕವಯತ್ರಿ ಅನಿತಾ ಪಿ ಪೂಜಾರಿ ತಾಕೊಡೆ ಅವರ ಶ್ರೀಮತಿ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ ವಿಜೇತ ಕವನ ಸಂಕಲನ ಅಂತರಂಗದ ಮೃದಂಗವನ್ನು, ಶೈಕ್ಷಣಿಕ ಹರಿಕಾರ, ಕುಲಾಯಿ ಬಿಲ್ಲವ ಸಂಘದ ಸ್ಥಾಪಕರಲ್ಲೋರ್ವರಾದ ಸಾಧು ಪೂಜಾರಿ, ಹಾಗೂ ತುಳು ಚೊಚ್ಚಲ ಕವನ ಸಂಕಲನ ಮರಿಯಲದ ಮದಿಮಾಲ್ ಕೃತಿಯನ್ನು ಮಂಗಳೂರು ಸಂತ ಎಲೋಶಿಯಸ್ ಕಾಲೇಜ್ ಉಪನ್ಯಾಸಕ ಜಾನಪದ ವಿದ್ವಾಂಸರಾದ ಗಣೇಶ್ ಅಮೀನ್ ಸಂಕಮಾರ್ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಸಭಾಧ್ಯಕ್ಷರಾದ ಎಮ್ ಟಿ ಸಾಲ್ಯನ್, ಮುಖ್ಯ ಅತಿಥಿಗಳಾದ ಶ್ರೀ ರಾಘವ ಸನಿಲ್ ಚೇಳ್ಯಾರು, ಶ್ರೀ ಜಗದೀಶ್ ಎ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಅನಿತಾ ಪಿ ಪೂಜಾರಿ ತಾಕೊಡೆಯವರ ಈ ತನಕದ ಸಾಹಿತ್ಯ ಸಾಧನೆಯನ್ನು ಗಮನಿಸಿ ಅವರನ್ನು ಸೇವಾ ಸಂಘದ ವತಿಯಿಂದ ಗಣ್ಯರಿಂದ ಹಾಗೂ ಹೆತ್ತವರ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು. ಅನಿತಾ ಪೂಜಾರಿಯವರು ಕಾವ್ಯ ಮಾಧ್ಯಮವು ತನ್ನಲ್ಲಿ ಜೀವಚೈತನ್ಯವನ್ನು ಉಕ್ಕಿಸಿ ಆವರಿಸಿಕೊಂಡ ಬಗೆಯನ್ನು ವಿವರಿಸಿ ತನ್ನನ್ನು ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Mulki-030317014 Mulki-030317015

Comments

comments

Comments are closed.

Read previous post:
Kinnigoli03031708
ದಿ. ರವಿಕುಮಾರ್ ಎಸ್ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ : ಸರಳ ವ್ಯಕ್ತಿತ್ವದ ರವಿ ಕುಮಾರ್ ಓರ್ವ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಸತ್ಯ ನಿಷ್ಟುರತೆಯಿಂದ ಎಲ್ಲಾ ವರ್ಗದ ಜನರೊಂದಿಗೆ ಬೆರೆತು ಸೇವೆ ಸಲ್ಲಿಸುತ್ತಿದ್ದರು. ಅವರ ಅಗಲುವಿಕೆ ಸಮಾಜಕ್ಕೆ...

Close