ಬಳ್ಕುಂಜೆ ಕಾಂಕ್ರಿಟ್ ರಸ್ತೆಗೆ ಗುದ್ದಲಿ ಪೂಜೆ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳನ್ನು ಅತ್ಯಾಧುನಿಕ ಮಟ್ಟದ ದೀರ್ಘ ಬಾಳಿಕೆಯ ಕಾಂಕ್ರೀಟ್ ರಸ್ತೆಗಳನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರಕಾರ ಪರಿಶಿಷ್ಟ ಪಂಗಡಗಳ ಕಾಲನಿಯ ರಸ್ತೆಗಳಿಗೂ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲು ಹೆಚ್ಚಿನ ಒತ್ತು ನೀಡುತ್ತಿದೆ. ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಗುರುವಾರ ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟ್ನಾಯಗುತ್ತು ಬಳಿಯ ರಸ್ತೆಗೆ ೨೫ ಲಕ್ಷರೂ ವೆಚ್ಚದ ಕಾಂಕ್ರಿಟ್ ರಸ್ತೆ ನಿರ್ಮಾಣದ ಗುದ್ದಲಿ ಪೂಜೆ ನಡೆಸಿ ಮಾತನಾಡಿದರು. ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಪುತ್ರನ್, ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಮಾಜಿ ತಾ.ಪಂ. ಸದಸ್ಯ ನೆಲ್ಸನ್ ಲೋಬೋ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ನಿರ್ಮಿತಿ ಕೇಂದ್ರದ ಇಂಜೀನಿಯರ್ ಶರತ್, ಪಂಚಾಯತ್‌ರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಬಳ್ಕುಂಜೆ ಗ್ರಾ. ಪಂ. ಸದಸ್ಯೆ ಮಮತಾ ಪೂಂಜಾ, ಶಶಿಕಲಾ, ಪ್ರಭಾಕರ ಶೆಟ್ಟಿ ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಎಮ್ ಅಸೀಫ್, ಸದಸ್ಯ ಪುತ್ತುಬಾವ, ಮಹಾಬಲ ಪೂಜಾರಿ, ತಾರನಾಥ , ಪ್ರಭಾಕರ ಶೆಟ್ಟಿ, ಗುತ್ತಿಗೆದಾರರಾದ ಶಫಿ, ಅಬ್ಬಾಸ್ ಅಲಿ, ಮತ್ತಿತರರು ಉಪಸ್ಥಿತರಿದ್ದರು.

Kinnigoli03031707

Comments

comments

Comments are closed.

Read previous post:
Mulki-030317013
ವಿಜಯಾ ಕಪ್-2017 ಆಳ್ವಾಸ್ ಮಡಿಲಿಗೆ

ಮೂಲ್ಕಿ: ಮೂಲ್ಕಿ ವಿಜಯಾ ಕಾಲೇಜು ಕ್ರೀಡಾ ಸಂಘದ ಸಂಯೋಜನೆಯಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾಕೂಟದ ಪ್ರಥಮ ಪ್ರಶಸ್ತಿಯನ್ನು ಮೂಡಬಿದ್ರೆ ಆಳ್ವಾಸ್ ಕಾಲೇಜು...

Close