ಲಯನ್ಸ್ ಕ್ಲಬ್ : ಹಿರಿಯ ಅಧ್ಯಕ್ಷರ ದಿನಾಚರಣೆ

ಕಿನ್ನಿಗೋಳಿ: ಎಲೆ ಮರೆಯ ಕಾಯಿಯಂತಿರುವ ಕಲಾಸಾಧಕರನ್ನ್ನು ಗುರುತಿಸಿ ಗೌರವಿಸಿದಾಗ ಅವರು ಇನ್ನಷ್ಟು ಸಾಧನೆಗೈಯಬಹುದು ಎಂದು ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಭಾನುವಾರ ನಡೆದ ಹಿರಿಯ ಅಧ್ಯಕ್ಷರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಕಟೀಲು ಮೇಳದ ಕಲಾವಿದ ಪಡ್ರೆ ಕುಮಾರ್, ಯುವ ಸಾಧಕಿ ಅಶ್ವಿಜಾ ಉಡುಪ, ಎಡನೀರು ಮೇಳದ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು, ಭೂತ ನೃತ್ಯ ಕಲಾವಿದ ಪದ್ಮನಾಭ, ಯಕ್ಷಗಾನ ಬಾಲ ಕಲಾವಿದ ಚೈತನ್ಯ, ಭರತನಾಟ್ಯ ಕಲಾವಿದೆ ಅನ್ನಪೂರ್ಣ, ನಾಟಕ ಕಲಾವಿದರಾದ ಸುಧಾಕರ ಸಾಲ್ಯಾನ್, ಸೀತಾರಾಮ ಶೆಟ್ಟಿ ಎಳತ್ತೂರು, ಯೋಗ ಕಲಾವಿದೆ ಮನಿಷಾ ಅವರನ್ನು ಸನ್ಮಾನಿಸಲಾಯಿತು. ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ, ಲಯನೆಸ್ ಅಧ್ಯಕ್ಷೆ ವತ್ಸಲಾ ರಾವ್, ಸವಿತಾ ಪಿ. ಶೆಟ್ಟಿ , ಲೀಲಾ ಬಂಜನ್ ಉಪಸ್ಥಿತರಿದ್ದರು.
ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ವೈ. ಯೋಗೀಶ್ ರಾವ್ ಸ್ವಾಗತಿಸಿದರು. ಪುರುಷೋತ್ತಮ ಶೆಟ್ಟಿ ವಂದಿಸಿದರು.

Kinnigoli03031709

Comments

comments

Comments are closed.

Read previous post:
Mulki-030317014
ಅನಿತಾ ಪೂಜಾರಿ ಅಭಿನಂದನೆ

ಕುಳಾಯಿ: ಈಗೀಗ ಬರೆಯುವವರ ಸಂಖ್ಯೆ ಕಡಿಮೆಯಾಗಿದೆ ಹಾಗೆಯೇ ಓದುವವರೂ ಇಲ್ಲ. ಮೊಬೈಲ್ ನಲ್ಲಿಯೇ ತಾಸುಗಟ್ಟಲೆ ಸಮಯವನ್ನು ವ್ಯರ್ಥ ಮಾಡುವ ಇಂದಿನ ಕಾಲದಲ್ಲಿ, ಮುಂಬಾಯಿಯಲ್ಲಿದ್ದುಕೊಂಡು ಅನಿತಾ ಪೂಜಾರಿ ತಾಕೊಡೆಯವರು...

Close