ದಿ. ರವಿಕುಮಾರ್ ಎಸ್ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ : ಸರಳ ವ್ಯಕ್ತಿತ್ವದ ರವಿ ಕುಮಾರ್ ಓರ್ವ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಸತ್ಯ ನಿಷ್ಟುರತೆಯಿಂದ ಎಲ್ಲಾ ವರ್ಗದ ಜನರೊಂದಿಗೆ ಬೆರೆತು ಸೇವೆ ಸಲ್ಲಿಸುತ್ತಿದ್ದರು. ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮುಲ್ಕಿ ಮೂಡಬಿದೆರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘ, ಲಾರಿ ಮಾಲಕರ ಸಂಘ ಹಾಗೂ ನಾಗರಿಕರ ಆಶ್ರಯದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಗುರುವಾರ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಪೋಲೀಸ್ ಅಧಿಕಾರಿ ರವಿಕುಮಾರ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಮೂಲ್ಕಿ ವೃತ್ತ ನೀರಿಕ್ಷಕ ಅನಂತಪದ್ಮನಾಭ ಮಾತನಾಡಿ ಇಲಾಖೆಯಲ್ಲಿ ಸಿಬ್ಬಂದಿಗಳ ಹಾಗೂ ಮೇಲಿನ ಅಧಿಕಾರಿಗಳ ಜೊತೆ ಅನ್ಯೋನ್ಯತೆಯಿಂದ ಇದ್ದು ಎಲ್ಲರಿಘೂ ಪ್ರೀತಿ ಪಾತ್ರರಾಗಿದ್ದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷೆ ಕಸ್ತೂರಿ ಪಂಜ , ಜಿ. ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ , ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು ಉಪಸ್ಥಿತರಿದ್ದರು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಸ್ವಾಗತಿಸಿದರು. ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಪ್ರಸ್ತಾವನೆಗೈದರು. ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli03031708

Comments

comments

Comments are closed.

Read previous post:
Kinnigoli03031707
ಬಳ್ಕುಂಜೆ ಕಾಂಕ್ರಿಟ್ ರಸ್ತೆಗೆ ಗುದ್ದಲಿ ಪೂಜೆ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳನ್ನು ಅತ್ಯಾಧುನಿಕ ಮಟ್ಟದ ದೀರ್ಘ ಬಾಳಿಕೆಯ ಕಾಂಕ್ರೀಟ್ ರಸ್ತೆಗಳನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರಕಾರ ಪರಿಶಿಷ್ಟ ಪಂಗಡಗಳ ಕಾಲನಿಯ ರಸ್ತೆಗಳಿಗೂ ಕಾಂಕ್ರಿಟ್ ರಸ್ತೆ...

Close