ವಿಜಯಾ ಕಪ್-2017 ಆಳ್ವಾಸ್ ಮಡಿಲಿಗೆ

ಮೂಲ್ಕಿ: ಮೂಲ್ಕಿ ವಿಜಯಾ ಕಾಲೇಜು ಕ್ರೀಡಾ ಸಂಘದ ಸಂಯೋಜನೆಯಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾಕೂಟದ ಪ್ರಥಮ ಪ್ರಶಸ್ತಿಯನ್ನು ಮೂಡಬಿದ್ರೆ ಆಳ್ವಾಸ್ ಕಾಲೇಜು ತಂಡ ಗಳಿಸಿದೆ. ದ್ವಿತೀಯ ಪ್ರಶಸ್ತಿಯನ್ನು ಎಸ್.ಡಿ.ಎಂ. ಕಾಲೇಜು ಉಜಿರೆ,ತೃತೀಯ ಪ್ರಶಸ್ತಿ ಶಾರದಾ ಕಾಲೇಜು ಬಸ್ರೂರು ಮತ್ತು ನಾಲ್ಕನೇ ಪ್ರಶಸ್ತಿಯನ್ನು ಪೋಂಪೈ ಕಾಲೇಜು ಐಕಳ ಗಳಿಸಿತು. ಪಂದ್ಯಾಕೂಟದ ಸವ್ಯಸಾಚಿಯಾಗಿ ಉಜಿರೆ ತಂಡದ ರಾಕೇಶ್,ಉತ್ತಮ ಆಕ್ರಮಣಕಾರ ಪ್ರಶಸ್ತಿಯನ್ನು ಆಳ್ವಾಸ್‌ನ ಜೀವನ್,ಬೆಸ್ಟ್ ಸೆಟ್ಟರ್ ಪ್ರಶಸ್ತಿಯನ್ನು ಆಳ್ವಾಸ್‌ನ ಸರ‍್ಪ್‌ರಾಜ್ ಗಳಿಸಿದರು.
ಸಮಾರೋಪ ಸಮಾರಂಭ: ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ.ಆರ್ .ಮೆಂಡನ್ ಮಾತನಾಡಿ, ಕ್ರೀಡೆ ಮತ್ತು ಶಿಕ್ಷಣದಲ್ಲಿ ಸಾಧನೆ ವಿದ್ಯಾರ್ಥಿ ಬದುಕಿನಲ್ಲಿ ಬಹಳ ಅಗತ್ಯವಾಗಿದ್ದು ಶಿಕ್ಷಣ ಸಹಿತ ಕ್ರೀಡಾ ಸಾಧಕರಿಗೆ ಜೀವನದಲ್ಲಿ ಬಹಳಷ್ಟು ಉತ್ತಮ ಅವಕಾಶಗಳು ಲಭ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ವಹಿಸಿದ್ದರು.
ಅತಿಥಿಗಳಾಗಿ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್,ಹಿರಿಯ ಸಮಾಜ ಸೇವಕ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮಿನಾ ಜಿ.ಆಳ್ವಾ,ಕರ್ನಾಟಕ ಬ್ಯಾಂಕ್ ಶಾಖಾ ಪ್ರಭಂದಕ ಮಂಜುನಾಥ ರಾವ್,ಉದ್ಯಮಿ ಗಂಗಾಧರ್ ಹೊಸಬೆಟ್ಟು, ಕಾಲೇಜು ಕ್ರೀಡಾ ನಿರ್ದೇಶಕ ಪ್ರೊ.ಸಿದ್ದರಾಮಣ್ಣ,ಕಾಲೇಜು ವಿದ್ಯಾರ್ಥಿ ನಾಯಕ ಪ್ರವೀಣ್ ಕುಮಾರ್,ವಿಜಯ ಕಪ್ ಸಮಿತಿಯ ದೇವಪ್ರಸಾದ್ ಪುನರೂರು ಅತಿಥಿಗಳಾಗಿದ್ದರು.
ಪ್ರವೀಣ್ ಕುಮಾರ್ ಸ್ವಾಗತಿಸಿದರು.ರೋಶ್ನಿ ಕ್ವಾಡ್ರಸ್ ನಿರೂಪಿಸಿದರು,ಧನ್ಯಶ್ರೀ ವಂದಿಸಿದರು.

Mulki-030317013

Comments

comments

Comments are closed.

Read previous post:
Kinnigoli02031706
ಮೋಹಿನಿ ಡಿ ಕಾಮತ್ 

ಕಿನ್ನಿಗೋಳಿ : ಕಿನ್ನಿಗೋಳಿ ಮೂರುಕಾವೇರಿಯ ದಿ. ದಾಮೋದರ ಕಾಮತ್ ಅವರ ಪತ್ನಿ ಮೋಹಿನಿ ಡಿ ಕಾಮತ್ ( 75ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಅವರಿಗೆ ಒಂದು...

Close