ಕಿನ್ನಿಗೋಳಿ : ರಸ್ತೆ ಸುರಕ್ಷಾ ಮಾಹಿತಿ

ಕಿನ್ನಿಗೋಳಿ: ದ್ವಿಚಕ್ರವಾಹನಗಳ ಅಪಘಾತಗಳು ಪ್ರತಿದಿನ ನಡೆಯುತ್ತಿದ್ದು ಇದಕ್ಕೆ ಯುವ ಜನರು ಕಾರಣವಾಗುತ್ತಿದ್ದಾರೆ. ಯಾವುದೇ ಅಸಡ್ಡೆ ಮಾಡದೆ ರಸ್ತೆ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ವಾಹನ ಚಾಲನಾ ಸಮಯದಲ್ಲಿ ಮೊಬೈಲ್ ಬಳಕೆ ಮಾಡಬಾರದು. ಎಂದು ಮಂಗಳೂರು ಸಂಚಾರಿ ಉತ್ತರ ಠಾಣೆಯ ಠಾಣಾಧಿಕಾರಿ ಮಂಜುನಾಥ ಹೇಳಿದರು.
ಕಿನ್ನಿಗೋಳಿ ರೋಟರಿ ರಜತ ಭವನ ಸಭಾಭವನದಲ್ಲಿ ಕಿನ್ನಿಗೋಳಿ ರೋಟರಿ ಪ್ರಾಯೋಜಕತ್ವದ ರಸ್ತೆ ಸುರಕ್ಷಾ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ದ್ವಿಚಕ್ರ ವಾಹನಗಳ ಚಾಲಕ ಹಾಗೂ ಹಿಂಬದಿ ಸವಾರ ಶಿರಸ್ತ್ರಾಣ ಧರಿಸಬೇಕು. ವಾಹನ ವಿಮೆ ಕಡ್ಡಾಯ ಮಾಡಿಸಬೇಕು. ಸಂಚಾರ ವ್ಯವಸ್ಥೆಯಲ್ಲಿ ವಾಹನಗಳಿಂದ ಸಮಸ್ಯೆಯಾದರೆ ಮೊಬೈಲ್ ಮೂಲಕ ಪೋಟೋ ತೆಗೆದು ನಮ್ಮ ಕಚೇರಿಯ ಮೊಬೈಲ್‌ಗೆ ವಾಟ್ಸಪ್ ಮೂಲಕ ಚಿತ್ರ ಸಹಿತ ಸಂದೇಶ ಕಳುಹಿಸಿ ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಸಮಸ್ಯೆ ಹಾಗೂ ಮುಖ್ಯ ರಸ್ತೆಯಲ್ಲಿ ಸಂತೆಯ ದಿನ ವಾಹನ ದಟ್ಟಣೆ ಸಮಸ್ಯೆಗಳ ಬಗ್ಗೆ ಜನರ ಪ್ರಶ್ನೆಗೆ ಉತ್ತರಿಸಿದ ಠಾಣಾಧಿಕಾರಿ ಕಿನ್ನಿಗೋಳಿಯಲ್ಲಿ ಬಸ್ ಬೇ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಈ ಬಗ್ಗೆ ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗಳು ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಎಂದರು
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಟೀಲು ಪ. ಪೂ. ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಯರಾಮ ಪೂಂಜ, ಕಿನ್ನಿಗೊಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಪೋಲೀಸ್ ಅಧಿಕಾರಿ ಮಂಜುನಾಥ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಮಾನಂದ ಪೂಜಾರಿ, ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ, ರೋಟರಿ ನಿಯೋಜಿತ ಅಧ್ಯಕ್ಷೆ ಸೆವ್ರಿನ್ ಲೋಬೊ ಉಪಸ್ಥಿತರಿದ್ದರು.

Kinnigoli040317011

Comments

comments

Comments are closed.

Read previous post:
Kinnigoli030317010
ಸಸಿಹಿತ್ಲು ಪ್ರತಿಷ್ಠಾ ವರ್ಧಂತಿ

ಕಿನ್ನಿಗೋಳಿ : ಸಸಿಹಿತ್ಲು ಶ್ರಿ ಭಗವತೀ ದೇವಸ್ಥಾನದಲ್ಲಿ ಮಾ.3ರಂದು ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ವಿಶೇಷ ಚಂಡಿಕಾಯಾಗ ಎಡಪದವು ವಿದ್ವಾನ್ ವೆಂಕಟೇಶ ತಂತ್ರಿ ಹಾಗೂ ವೇ.ಮೂ. ಕೃಷ್ಣಮೂರ್ತಿ ಭಟ್ ಹೊಗೆಗುಡ್ಡೆ...

Close