ಹಳೆಯಂಗಡಿ ಕದಿಕೆ ಉರೂಸ್

ಕಿನ್ನಿಗೋಳಿ : ಸರಕಾರದ ವಿದ್ಯಾಸಿರಿ ಯೋಜನೆಯಲ್ಲಿ ಸುಮಾರು ೪೦ ಸಾವಿರ ಅಲ್ಪಸಂಖ್ಯಾತ ಫಲಾನುಭಾವಿಗಳಿಗೆ ಧನ ಸಹಾಯ ನೀಡಲಾಗುತ್ತದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಶನಿವಾರ ಹಳೆಯಂಗಡಿ ಕದಿಕೆಯಲ್ಲಿ ನಡೆದ ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾಹಿ ದರ್ಗಾ ಶರೀಫ್‌ನ ಉರೂಸ್ ಸಮಾರೋಪ ಸಮಾರಂಭ ಮತ್ತು ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾ ಕೂಟದಲ್ಲಿ ಮಾತನಾಡಿದರು.
ಸುಮಾರು ೪೦೦ ವರ್ಷಗಳ ಇತಿಹಾಸ ಹೊಂದಿರುವ ಕದಿಕೆ ಕೆಳಗಿನ ಮಸೀದಿಯನ್ನು ಮೂಲ ವಾಸ್ತುವಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಎಲ್ಲಾ ಧರ್ಮಗಳು ಶಾಂತಿ ಸೌಹಾರ್ದತೆಯನ್ನು ಮಾತ್ರ ಭೋದಿಸಿವೆ. ಇದನ್ನು ಅರಿತು ಬಾಳಿದರೆ ಎಲ್ಲರಿಗೂ ನೆಮ್ಮದಿ ಸಿಗುವುದು ಎಂದರು.
ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಅಝೀಝ್ ದಾರಿಮಿ ಮಾತನಾಡಿ ಮಾನವೀಯ ಮೌಲ್ಯಗಳ ಜೀವನ ಸಾಗಿಸಿಸಬೇಕು. ಜಾತಿ ಧರ್ಮಗಳ ಸಂಕೋಲೆ ಮುರಿದು ಸರ್ವರನ್ನೂ ಪ್ರೀತಿಸುವವರು ಮಾತ್ರ ನೈಜ ಮುಸ್ಲಿಮರಾಗಲು ಸಾಧ್ಯ ಎಂದರು.
ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಉದ್ಘಾಟಿಸಿದರು.
ಅಸೈಯದ್ ಅಲ್‌ಹಾದಿ ಮಶ್‌ಹೂರ್ ತಂಙಳ್ ಕೇರಳ ದುವಾ ಆಶೀರ್ವಚನ ಗೈದರು.
ಹಳೆಯಂಗಡಿ ಕದಿಕೆ ಜುಮಾ ಮಸೀದಿಯ ಖತೀಬ್ ಕೆ.ಎಚ್. ಅಬ್ದುಲ್ ರಹಿಮಾನ್ ಫೈಝಿ, ಕರ್ನಾಟಕ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ, ಇಸ್ಲಾಮಿಕ್ ಕಲ್ಚರಲ್ ಫೌಡೇಶನ್‌ನ ಪ್ರಧಾನ ಕಾರ್ಯದರ್ಶಿ ಮಮ್ತಾಝ್ ಅಲಿ, ಮೂಡಾ ಸದಸ್ಯ ವಸಂತ್ ಬೆರ್ನಾರ್ಡ್, ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಅಝ್ ಹರ್ ಫೈಝಿ ಬೊಳ್ಳೂರು ಉಸ್ತಾದ್, ಕದಿಕೆ ಮಸೀದಿಯ ಸದರ್ ಮುಅಲ್ಲಿಮ್ ಕೆ.ಎ. ಹಬೀಬ್ ರೆಹ್ಮಾನ್, ಸಂತೆಕಟ್ಟೆ ಜುಮಾ ಮಸೀದಿಯ ಝತೀಬ್ ಇಸ್ಮಾಯೀಲ್ ದಾರೆಇಮಿ, ಇಂದಿರಾನಗರ ಮಸಿದಿಯ ಸದರ್ ಮುಅಲ್ಲಿಮ್ ಹನೀಫ್ ದಾರಿಮಿ ಅಂಕೋಲಾ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್ ದಾಸ್, ಸದಸ್ಯ ಉಮೇಶ್ ಪೂಜಾರಿ, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಅಬ್ದುಲ್ ಖಾದರ್ ಇಂದಿರಾನಗರ, ಎಂ.ಎಚ್. ಬಶೀರ್ ಸಾಗ್, ಬಶೀರ್ ಸಾಗ್, ಎಚ್.ಎಸ್. ಹಮೀದ್ ಸಾಗ್, ಅಬ್ದುಲ್ ಅಝೀಝ್ ಬೊಳ್ಳೂರು, ಮುಲ್ಕಿ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಉರೂಸ್ ಸಮಿತಿಯ ಅಧ್ಯಕ್ಷ ಬಶೀರ್ ಅಹ್ಮದ್ ಕಲ್ಲಾಪು, ಸಾಹುಲ್ ಹಮೀದ್ ಕದಿಕೆ, ಜಮಾತ್ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಸಾಗ್, ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಹಾಜಿ ಅಬ್ದುಲ್ ರಹಿಮಾನ್ ಕುಡುಂಬೂರು, ಪ್ರಚಾರ ಸಮಿತಿ ಅಧ್ಯಕ್ಷ ಫಾರೂಖ್ ಸಾಗ್, ಕೆ.ಎಚ್. ಯೂಸುಫ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.

ಹಳೆಯಂಗಡಿ ಕದಿಕೆ ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾ ದರ್ಗಾ ಶರೀಫ್ ಪ್ರವಾಸಿ ತಾಣವಾಗಿದ್ದು, ಪ್ರತೀ ದಿನ ನೂರಾರು ಪ್ರವಾಸಿಗರು ಭೇಟಿ ನೀಡಿ ಮಹಾತ್ಮರನ್ನು ಸಂದರ್ಶಿಸುತ್ತಾರೆ. ಈ ಸಂದರ್ಭ ಪ್ರವಾಸಿಗರಿಗೆ ತಂಗುವ ಮತ್ತು ಮೂಲ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಸಮಿತಿ ಚಿಂತನೆ ನಡೆಸಿದೆ. ಈ ಬಗ್ಗೆ ಶಾಸಕರು ಸಂಬಂಧ ಪಟ್ಟ ಇಲಾಖೆಯಿಂದ ನೀಡಬಹುದಾದ ಅನುದಾನದ ಹೆಚ್ಚಿನ ಮೊತ್ತವನ್ನು ಕಲ್ಪಿಸಲು ಸಹಕರಿಸಬೇಕೆಂದು ವಿನಂತಿಸಿದ ಉರೂಸ್ ಸಮಿತಿಗೆ ಉತ್ತರಿಸಿದ ಶಾಸಕ ಅಭಯಚಂದ್ರ ಜೈನ್, ಸಂಬಂಧ ಪಟ್ಟ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸಿ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸುವ ಮೂಲಕ ಈ ವರ್ಷವೇ ಕಾಮಗಾರಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Kinnigoli06031701

Comments

comments

Comments are closed.

Read previous post:
Kinnigoli-06031703
ಹಳೆಯಂಗಡಿ: ಕನ್ನಡ ಚಿಂತನ ವೇದಿಕೆ

ಹಳೆಯಂಗಡಿ: ಕನಕದಾಸರು ತಮ್ಮ ದಾಸವಾಣಿಯ ಮೂಲಕ ಬದುಕಿನ ಮೌಲ್ಯಗಳನ್ನು ಎಲ್ಲರೂ ತಿಳಿಯುವಂತೆ ಬಹಳ ಸರಳವಾಗಿ ನಿರೂಪಿಸಿದ್ದಾರೆ ಎಂದು ಹಿರಿಯ ಸಂಶೋಧಕ ಡಾ.ಎಂ. ಪ್ರಭಾಕರ ಜೋಶಿ ಹೇಳಿದರು. ಹಳೆಯಂಗಡಿ ಪ್ರಥಮ...

Close